Home ನಮ್ಮ ಜಿಲ್ಲೆ ದಾವಣಗೆರೆ ಸಿದ್ಧರಾಮಯ್ಯರಿಂದ ಮತಾಂತರಕ್ಕೆ ಪ್ರಚೋದನೆ: ಮುತಾಲಿಕ್ ಆರೋಪ

ಸಿದ್ಧರಾಮಯ್ಯರಿಂದ ಮತಾಂತರಕ್ಕೆ ಪ್ರಚೋದನೆ: ಮುತಾಲಿಕ್ ಆರೋಪ

0

ದಾವಣಗೆರೆ: ಸಿಎಂ ಸಿದ್ಧರಾಮಯ್ಯ ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಎನ್ನುವ ಕಾರಣವೊಡ್ಡಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ ಇದುವರೆಗೂ ಬಂದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಂದ ಮಾತ್ರಕ್ಕೆ ಮತಾಂತರವಾದರೆ ಸಮಾನತೆ ಸಿಗುತ್ತುದಾ ಎಂದು ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಮತಾಂತರ ಆದವರು ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ಬರೆಸುವುದಕ್ಕಿಂತ ಅದೇ ಧರ್ಮವನ್ನು ಬರೆಸಿ, ಮತ್ತೆ ಯಾಕೆ ಜಾತಿ ಉಲ್ಲೇಖಿಸುತ್ತೀರಿ? ಕ್ರಿಶ್ಚಿಯನ್ ಮತಕ್ಕೆ ಮತಾಂತರವಾದರೆ ಅವರೆಂದು ಪೂರ್ತಿಯಾಗಿ ಒಪ್ಪಿಕೊಳ್ಳಲ್ಲ. ವಿವಾಹ ಸಂಬಂಧಗಳನ್ನೂ ಮಾಡುವುದಿಲ್ಲ. ಪ್ರತ್ಯೇಕವಾಗಿಯೇ ನೋಡುತ್ತಾರೆ. ಇಲ್ಲೂ ಕೂಡ ಸಮಾನತೆ ಸಿಗುವುದಿಲ್ಲ ಎಂದರು.

ಮುಷ್ತಾಕ್‌ರಿಂದ ದಸರಾ ಉದ್ಘಾಟಿಸಿದರೆ ಚಾಮುಂಡಿ ತಾಯಿ ಶಾಪಕ್ಕೆ ಗುರಿಯಾಗುತ್ತಿರಿ: ಕೂಲಿ ಕೆಲಸ ಮಾಡುವ ಹಿಂದೂ ಮಹಿಳೆಯನ್ನು ಕರೆದುಕೊಂಡು ಬಂದು ದಸರಾ ಉದ್ಘಾಟನೆ, ಚಾಮುಂಡಿ ತಾಯಿ ಪೂಜೆ ಮಾಡಿಸಿದ್ದರೂ ಸಿಎಂ ಸಿದ್ಧರಾಮಯ್ಯರನ್ನ ಗೌರವಿಸುತಿದ್ದೆವು. ಆದರೆ, ಗೋಮಾಂಸ ಭಕ್ಷಕ ಸಮಾಜದಿಂದ ಬಂದವರನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ನಿಮಗೆ ಚಾಮುಂಡಿ ತಾಯಿ ಶಾಪ ಕೊಡುತ್ತಾಳೆ. ಬಾನು ಮುಷ್ತಾಕ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಅವರ ಸಾಧನೆಗೆ ನಾವು ಅಭಿನಂಧನೆ ಸಲ್ಲಿಸುತ್ತೇವೆ. ಗೋ ಮಾಂಸ ಭಕ್ಷಕ ಸಮಾಜದಿಂದ ಬಂದ ನೀವು ದಸರಾ ಉದ್ಘಾಟನೆಗೆ ಲಾಯಕ್ ಇಲ್ಲ. ದಸರಾ ಸರ್ಕಾರಿ ಕಾರ್ಯಕ್ರಮ ಅಲ್ಲ. ನೀವು ಅರಿಶಿಣ ಕುಂಕುಮ ಧರಿಸಲ್ಲ. ಸರಕಾರಕ್ಕೆ ಬೇರೆ ಹಿಂದೂ ಮಹಿಳೆಯರು ಸಿಗಲಿಲ್ವಾ? ಸರಕಾರ ಮಾಡುತ್ತಿರುವುದು ತಪ್ಪು ಕೂಡಲೇ ನಿರ್ಧಾರದಿಂದ ಹಿಂದೆಸರಿಯಬೇಕು ಎಂದು ಮುತಾಲಿಕ್‌ ಆಗ್ರಹಿಸಿದರು.

ಹಿಂದೂ ಹಬ್ಬಗಳಲ್ಲಿ ಗಲಭೆ ಸೃಷ್ಟಿಸಿದರೆ ಮನೆಹೊಕ್ಕು ಹೊಡಿತೀವಿ: ಮುಸ್ಲಿಂ ಗೂಂಡಾಗಳು ಹಿಂದೂಗಳ ಹಬ್ಬಗಳಲ್ಲಿ ಗಲಭೆ ಸೃಷ್ಠಿಸಲು ಪ್ರಯತ್ನಿಸಿದರೆ ಇನ್ನು ಮುಂದೆ ಧರಣಿ, ಪ್ರತಿಭಟನೆ ಮಾಡಲ್ಲ ಹೊಕ್ಕು ಹೊಡಿತೀವಿ. ಮದ್ದೂರಿನಲ್ಲಿ ಮುಸ್ಲಿಂ ಕಿಡಿಗೇಡಿಗಳು ಗಣೇಶನ ಮೇಲೆ ಕಲ್ಲು ಎಸೆದು ಅವಮಾನ ಮಾಡಿದರು, ಗಲಭೆ ಉಂಟಾಯಿತು. ಇದೇನು ಮೊದಲಲ್ಲ, ಕೊನೆಯೂ ಅಲ್ಲ. ಕಾಂಗ್ರೆಸ್‌ನ ಓಟ್ ಬ್ಯಾಂಕ್ ಕಾರಣದಿಂದಲೇ ಹಿಂದೂಗಳ ಹಬ್ಬಗಳಲ್ಲಿ ಗಲಭೆ ಸೃಷ್ಠಿಯಾಗುತ್ತದೆ. ಇದಕ್ಕೆ ಮದ್ದೂರು ಮತ್ತು ಸಾಗರದ ಪ್ರಕರಣಗಳು ತಾಜಾ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಗರದಲ್ಲಿ ಮುಸ್ಲಿಂ ಬಾಲಕರು ಗಣೇಶನ ಮೇಲೆ ಉಗುಳುತ್ತಾರೆ. ಈದ್ ಮಿಲಾದ್, ಬಕ್ರೀದ್‌ನಲ್ಲಿ ಯಾವುದೇ ರೀತಿ ಗಲಾಟೆ ಆಗಲ್ಲ. ಆದರೆ ನಮ್ಮ ಹಬ್ಬಗಳ ಮೇಲೆ ಈ ರೀತಿ ಆಗುತ್ತಿದೆ. ಅವರಲ್ಲಿ ಮೂರ್ತಿ ಪೂಜೆ ಮಾಡುವವರನ್ನ ಕೊಂದು ಹಾಕಿ ಅಂತಾರೆ. ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆಯುವುದಕ್ಕೆ ಕಾರಣ ಅವರ ಮಸೀದಿ, ಮದರಸಾಗಳು ಎಂದು ಆಪಾದಿಸಿದರು.

ನಮ್ಮ ದೇವರು ಮತ್ತು ಹಿಂದೂ ಸಮಾಜದ ಮೇಲೆ ಪುಂಡಾಟಿಕೆ ನಾವು ಸಹಿಸಲ್ಲ. ಸರ್ಕಾರ ಕೇವಲ ಮುಸ್ಲಿಂ ಓಟ್‌ನಿಂದ ಗೆದ್ದಿಲ್ಲ. ನಿಮ್ಮ ಪಕ್ಷದಲ್ಲಿ ಹಿಂದೂಗಳಿದ್ದಾರೆ ಅವರು ಪೂಜೆ ಮಾಡುತ್ತಾರೆ. ನೀವು ಹೀಗೆ ತುಷ್ಟಿಕರಣ ಮಾಡುತ್ತಾ ಹೊದರೆ ನಿಮ್ಮ ಮೇಲು ದಬ್ಬಾಳಿಕೆ ಆಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಸಿದರು.

ಮದ್ದೂರಿನಲ್ಲಿ 500 ಹಿಂದೂಗಳ ಮೇಲೆ ಕೇಸ್ ಹಾಕಿದ್ದಾರೆ. ಕಲ್ಲು ಎಸೆದವರು, ಪ್ರತಿಭಟನೆ ಮಾಡಿದವರು ಒಂದೇನಾ? ಶ್ರೀರಾಮ ಸೇನೆ ಮದ್ಧೂರಿನ ಕೇಸ್ ನಿಭಾಯಿಸುತ್ತೆ. ವಕೀಲರ ತಂಡ ಭೇಟಿ ಕೊಟ್ಟು ಹೋರಾಟ ಮಾಡುತ್ತದೆ. ಯಾರು ಹೆದರಬಾರದು ಎಂದು ಮುತಾಲಿಕ್‌ ಅಭಯ ನೀಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version