Home ನಮ್ಮ ಜಿಲ್ಲೆ ದಾವಣಗೆರೆ ಆಸ್ತಿವಿಚಾರಕ್ಕೆ ಮಹಿಳೆಯ ಅರಬೆತ್ತಲೆಗೊಳಿಸಿ ಹಲ್ಲೆ: ವರ್ಷದ ನಂತರ ವೀಡಿಯೋ ವೈರಲ್

ಆಸ್ತಿವಿಚಾರಕ್ಕೆ ಮಹಿಳೆಯ ಅರಬೆತ್ತಲೆಗೊಳಿಸಿ ಹಲ್ಲೆ: ವರ್ಷದ ನಂತರ ವೀಡಿಯೋ ವೈರಲ್

0

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಣಿಕೊಪ್ಪಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರಿಬ್ಬರು ಗಲಾಟೆ ಮಾಡಿ, ಅರೆಬೆತ್ತಲೆಗೊಳಿಸಿ, ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆಯ ವೀಡಿಯೋ ಇದೀಗ ಒಂದು ವರ್ಷದ ತರುವಾಯ ತಡವಾಗಿ ಬೆಳಕಿಗೆ ಬಂದಿದೆ.

ಗೋಣಿಕೊಪ್ಪಲು ಗ್ರಾಮದ ಎರಡು ಮನೆಯವರ ಮಧ್ಯೆ ಆಸ್ತಿ ವಿಚಾರವಾಗಿ ಇದ್ದ ಗಲಾಟೆ ಹಿನ್ನೆಲೆಯಲ್ಲಿ 29 ಜೂನ್ 2024ರಂದು ಓರ್ವ ಮಹಿಳೆಯು ತನ್ನ ಎದುರಿನ ಮನೆಯಲ್ಲಿದ್ದ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದು, ಆಕೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ದರಶ್ಯಗಳು ಹರಿದಾಡುತ್ತಿವೆ.

ನಿವೃತ್ತ ಬ್ಯಾಂಕ್ ಮ್ಯಾನೇಜರ್, ವಿಕಲಚೇತನರು ಆಗಿರುವ ಅವರ ಪತ್ನಿಯ ಮೇಲೆ ಹಲ್ಲೆ ಮಾಡಲಾಗಿದೆ. ತಮ್ಮ ಜಾಗದಲ್ಲಿ ಮನೆ ಕಟ್ಟಿದ್ದಾರೆ. ನಮ್ಮ ಜಾಗದಲ್ಲಿ ಕಟ್ಟಿದ್ದು, ಅದಕ್ಕೆ ಹಣ ನೀಡಬೇಕು ಎಂಬ ವಿಚಾರಕ್ಕೆ ಜಗಳವಾಗಿದೆ ಎನ್ನಲಾಗಿದೆ. ಇಡೀ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ದೂರು ನೀಡುವುದಕ್ಕೂ ಸಹ ಸಂತ್ರಸ್ಥ ಮಹಿಳೆ, ಆಕೆಯ ಪತಿ ಹಿಂದೇಟು ಹಾಕಿದ್ದಾರೆ. ಘಟನೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚನ್ನಗಿರಿ ಪೊಲೀಸ್ ಇಲಾಖೆಯವರಾದರೂ ಸ್ವಯಂ ಪ್ರೇರಿತ ದೂರು ದಾಖಲು ಮಾಡಿ, ಕ್ರಮ ಕೈಗೊಂಡಿಲ್ಲವೆಂಬ ಮಾತು ಕೇಳಿ ಬರುತ್ತಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version