Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: 4 ತಿಂಗಳ ಕಾಲ ಸತೀಶ್ ಪೂಜಾರಿ ಗಡಿಪಾರು!

ದಾವಣಗೆರೆ: 4 ತಿಂಗಳ ಕಾಲ ಸತೀಶ್ ಪೂಜಾರಿ ಗಡಿಪಾರು!

0

ದಾವಣಗೆರೆ: ಹಿಂದೂ ಮುಖಂಡ, ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತೀಶ್ ಪೂಜಾರಿಯನ್ನು ಗಡಿಪಾರು ಮಾಡಿ ಉಪ ವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸತೀಶ್ ಪೂಜಾರಿಯ ಮೇಲೆ 23 ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮುಂಬರುವ 2026ರ ಜನವರಿ 31ರವರೆಗೆ ಅಂದರೆ ಸುಮಾರು ನಾಲ್ಕು ತಿಂಗಳುಗಳ ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಿರುವುದಾಗಿ ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ʼಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದ್ದಾರೆ.

ದಾವಣಗೆರೆಯಿಂದ ಗಡಿಪಾರು ಮಾಡಿದ್ದು, ಬೀದರ್ ಜಿಲ್ಲೆ ಮಂಟಾಳ್ ವರೆಗೆ ಇವರಿಗೆ ಠಾಣೆಗೆ ತೆರಳಿ ಹಾಜರಾತಿ ಹಾಕಲು ಅವಕಾಶ ನೀಡಿದೆ ಎಂದು ಅವರು ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version