ಬೆಂಗಳೂರು: ಸಿಟಿಯಲ್ಲಿ ಶುದ್ಧ ಗಾಳಿಯ ಸಮಸ್ಯಯನ್ನ ಸಾರ್ವಜನಿಕರು ಎದುರಿಸುತ್ತಿದ್ದಾರೆ. ಹಾಗೇ ಉಸಿರಾಟದ ಮೂಲ ವಸ್ತು ಆಮ್ಲಜನಕ ಇದಿಲ್ಲದಿದ್ದರೆ ಮಾನವ ಅಥವಾ ಜೀವಿಗಳ ಬದುಕುಳಿವಿಕೆಗೆ ತೊಂದರೆ ಆಬಹುದು. ಇದೇ ಕಾರಣದಿಂದ ಮರ, ಗಿಡಗಳನ್ನ ಉಳಿಸಿ ಬೆಳಸುವುದು ಬಹಳ ಪ್ರಮುಖ.
ಬೆಂಗಳೂರು ಸಿಟಿಯಲ್ಲಿ ಎಲ್ಲಂದರಲ್ಲಿ ಕಟ್ಟಡಗಳ ನಿರ್ಮಾಣವನ್ನ ಕಾಣುತ್ತೆವೆ. ಹೀಗಾಗಿ ಮರಗಿಡಗಳ ಸಂಖ್ಯೆ ಅತೀ ಕಡಿಮೆಯಾಗಿದೆ. ಆದರೆ ವಿದ್ಯಾಲಯಗಳ ವಾತಾವರ್ಣದಲ್ಲಿ ಸ್ವಲ್ಪಮಟ್ಟಿಗೆ ಹಸಿರು ವಾತಾವರ್ಣವನ್ನ ಕಾಣಬಹುದು. ವಿದ್ಯಾಲಯಗಳಲ್ಲಿ ಹಸಿರು ಯಾಕಿರಬೇಕು? ಮತ್ತು ಇದರಿಂದ ಆಗುವ ಪ್ರಯೋಜನೆಗಳೆನು? ಎಂದರೇ..
ಹೌದು.. ಅಭ್ಯಾಸ ಮಾಡುವಾಗ ಒಳ್ಳೆಯ ಗಾಳಿ ಬರಲಿ ಮತ್ತು ವಿಧ್ಯಾರ್ಥಿಗಳಲ್ಲಿ ಸಕಾರಾತ್ಮಕ ಆಲೋಚನೆ ಬರಲಿ ಎನ್ನುವ ಕಾರಣದಿಂದ ಹಸಿರು ಪ್ರಾಮುಖ್ಯತೆಯನ್ನ ಹೊಂದಿದೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಮರ ಕಡಿಯುವಿಕೆಗೆ ಭೂ ಮಂಜೂರಾತಿಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಸ್ವಯಂ ಜಾಗೃತಿ ಟ್ರಸ್ಟ್ ಮತ್ತು ಸಾಮಾಜಿಕ ಕಾರ್ಯಕರ್ತೆ ಪಾರ್ವತಿ ಶ್ರೀರಾಮ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್ ಶುಕ್ರವಾರ ಸರ್ಕಾರ, ಬೆಂಗಳೂರು ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ರಾಷ್ಟ್ರೀಯ ಕಾನೂನು ಶಾಲೆ ಆಫ್ ಇಂಡಿಯಾ ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಐಯು) ಮತ್ತು ಇತರ ಹಲವಾರು ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಬಿಯುನ ಜ್ಞಾನಭಾರತಿ ಆವರಣದೊಳಗೆ ಬಹು ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡುವುದನ್ನು ಮತ್ತು ಮರಗಳನ್ನು ಕಡಿಯಲು ನೀಡಲಾದ ಅನುಮತಿಯನ್ನ ಪಿಐಎಲ್ ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 9 ಕ್ಕೆ ಮುಂದೂಡಿದೆ.
ಅರ್ಜಿಯ ಪ್ರಕಾರ, ಪಿಎಂ-ಯುಎಸ್‌ಎಚ್‌ಎ ಯೋಜನೆಯಡಿ ಯುಜಿಸಿ ಅನುದಾನಿತ ಯೋಜನೆಗಾಗಿ ಬಯೋ ಪಾರ್ಕ್-2 ರಲ್ಲಿ 192 ಮರಗಳನ್ನು ಕಡಿಯಲು ಬಿಯುಗೆ ಅನುಮತಿ ನೀಡಲಾಗಿದೆ. ಅರ್ಜಿದಾರರು ಬಯೋ ಪಾರ್ಕ್ ಹಳೆಯ ಕಾಡಿನ ಭಾಗವಾಗಿದ್ದು, ಪರಿಸರ ಮತ್ತು ಐತಿಹಾಸಿಕ ಮಹತ್ವದ ತಾಣವಾಗಿದೆ ಎಂದು ವಾದಿಸಿದರು.
ಯುಜಿಸಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಎನ್‌ಎಎಸಿ, ಯುವಿಸಿಇ, ಎನ್‌ಎಲ್‌ಎಸ್‌ಐಯು ಸೇರಿದಂತೆ ಇತರ ಸಂಸ್ಥೆಗಳಿಗೆ ಕ್ಯಾಂಪಸ್‌ನೊಳಗೆ ಪ್ರಸ್ತಾವಿತ ಭೂ ಹಂಚಿಕೆಯ ವಿರುದ್ಧ ನಿರ್ದೇಶನಗಳನ್ನು ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದ್ದು, ಹೈಕೋರ್ಟ್ ಮಧ್ಯಪ್ರವೇಶಿಸುವಂತೆ ಒತ್ತಾಯಿಸಲಾಗಿದೆ.
