ಇಂದಿನ ಯುವಸಮೂಹ ಡ್ರಗ್ಸ್‌ಗೆ ದಾಸರಾಗುತ್ತಿರುವುದು ನೋವಿನ ಸಂಗತಿ. ಕ್ಷಣಕಾಲದ ಸುಖಕ್ಕೆ ಜೀವನವನ್ನು ನಾಶಪಡಿಸಿಕೊಳ್ಳುತ್ತಿರುವ ಯುವ ಸಮೂಹವನ್ನು ಡ್ರಗ್ಸ್ ಜಾಲದಿಂದ ರಕ್ಷಣೆ ಮಾಡಲು ಹಾಗೂ ಹೊರತರಲು ಇದೀಗ ಕರ್ನಾಟಕ ಪೊಲೀಸರು ‘ಸನ್ನಿತ್ರ’ ಉಪಕ್ರಮವನ್ನು ಆರಂಭಿಸಿದ್ದಾರೆ.
‘ಸನ್ನಿತ್ರ’ (ಒಳ್ಳೆಯ ಸ್ನೇಹಿತ) ಮಾದಕ ವ್ಯಸನದಿಂದ ಹೋರಾಡುತ್ತಿರುವ ವ್ಯಕ್ತಿಗಳಿಗೆ ನಿರಂತರ ಬೆಂಬಲ, ಪುನರ್ವಸತಿ ಮತ್ತು ಮೇಲ್ವಿಚಾರಣೆಯನ್ನು ಒದಗಿಸುವ ಬಗ್ಗೆ ಗುರಿಹೊಂದಿದೆ. ಡ್ರಗ್ಸ್ ಪೀಡಿತರಿಗೆ ಸಹಾನುಭೂತಿ, ಮಾರ್ಗದರ್ಶನ ಹಾಗೂ ಸಮಸ್ಯೆಯಿಂದ ಹೊರತರುವ ಬಗ್ಗೆಯೂ ಸಹ ಪ್ರಯತ್ನಿಸುತ್ತದೆ.
‘ಸನ್ನಿತ್ರ’ (ಒಳ್ಳೆಯ ಸ್ನೇಹಿತ) ಮಾದಕ ವ್ಯಸನದಿಂದ ಹೋರಾಡುತ್ತಿರುವ ವ್ಯಕ್ತಿಗಳಿಗೆ ನಿರಂತರ ಬೆಂಬಲ, ಪುನರ್ವಸತಿ ಮತ್ತು ಮೇಲ್ವಿಚಾರಣೆಯನ್ನು ಒದಗಿಸುವ ಬಗ್ಗೆ ಗುರಿಹೊಂದಿದೆ. ಡ್ರಗ್ಸ್ ಪೀಡಿತರಿಗೆ ಸಹಾನುಭೂತಿ, ಮಾರ್ಗದರ್ಶನ ಹಾಗೂ ಸಮಸ್ಯೆಯಿಂದ ಹೊರತರುವ ಬಗ್ಗೆಯೂ ಸಹ ಪ್ರಯತ್ನಿಸುತ್ತದೆ.
‘ಸನ್ನಿತ್ರ’ ಉಪಕ್ರಮವು ಡ್ರಗ್ಸ್ ಪೀಡಿತರಾಗಲು ಮೂಲ ಕಾರಣ ಪತ್ತೆ ಮಾಡುವುದು, ನಿರಂತರ ಮಾರ್ಗದರ್ಶನ ಮತ್ತು ಪೀಡಿತ ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ಗೌಪ್ಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸುವ ಮೂಲಕ ಜೀವನವನ್ನು ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಎಂಎ ಸಲೀಂ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಆರೋಪಿಗಳನ್ನು ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿಸುವುದು, ನಿಷಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವುದು, ಆರೋಪ ಪಟ್ಟಿ ಸಲ್ಲಿಸುವುದು ಪೊಲೀಸರ ಕರ್ತವ್ಯವಾದರೂ ಸಹ ಆರೋಪಿಗಳು ಮತ್ತು ವ್ಯಸನಿಗಳು ಮಾದಕವಸ್ತು ಮತ್ತೆ ಬಳಕೆ ಮಾಡದಂತೆ ಅಥವಾ ಅಪರಾಧ ಚಟುವಟಿಕೆಗಳಿಗೆ ಮರಳದಂತೆ ನೋಡಿಕೊಳ್ಳಲು ಸಮಗ್ರ ಮತ್ತು ನಿರಂತರ ಮೇಲ್ವಿಚಾರಣಾ ವ್ಯವಸ್ಥೆ ಬಗ್ಗೆಯೂ ಸಹ ಪೊಲೀಸರು ಗಮನಹರಿಸಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿ ಪೊಲೀಸ್ ಠಾಣೆಯಲ್ಲಿ ಮೀಸಲಾದ ‘ಸನ್ನಿತ್ರ’ ಸಹಾಯವಾಣಿ ಸ್ಥಾಪಿಸಲಾಗುವುದು. ಮಾದಕ ವ್ಯಸನದ ವಿರುದ್ಧ ಹೋರಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಲು ಮತ್ತು ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಯನ್ನು ಮಾರ್ಗದರ್ಶಕರಾಗಿ ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅವರ ವಿವರಗಳನ್ನು ಗೌಪ್ಯವಾಗಿ ನೋಂದಾಯಿಸಲಾಗುತ್ತದೆ. ವೈಯಕ್ತಿಕ ಮಾಹಿತಿಯ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಹಿರಿಯ ಅಧಿಕಾರಿಗಳ ಜೊತೆ ಮಾತ್ರ ಹಂಚಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
“ಸನ್ನಿತ್ರ ಯೋಜನೆಯಡಿಯಲ್ಲಿ ನೇಮಕಗೊಂಡ ಪೊಲೀಸ್ ಸಿಬ್ಬಂದಿ ಡ್ರಗ್ಸ್ ಬಾಧಿತ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳ ಅವರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಬೇಕು ಮತ್ತು ಮಾಸಿಕ ಪ್ರಗತಿಯನ್ನು ಪತ್ತೆಹಚ್ಚಲು ಮಾನಸಿಕ-ಆರೋಗ್ಯ ವೃತ್ತಿಪರರೊಂದಿಗೆ ಸಮನ್ವಯ ಸಾಧಿಸಬೇಕು“. ಎಂಎ ಸಲೀಂ, ಪೊಲೀಸ್ ಮಹಾನಿರ್ದೇಶಕ“
