Home ನಮ್ಮ ಜಿಲ್ಲೆ ಬಾಗಲಕೋಟೆ ಪುಣ್ಯಸ್ನಾನದಲ್ಲಿ ಪರಿಸರ ಜಾಗೃತಿ: ಕಡಲೆ ಹಿಟ್ಟಿನ ಪಾಕೇಟ್ ವಿತರಣೆ

ಪುಣ್ಯಸ್ನಾನದಲ್ಲಿ ಪರಿಸರ ಜಾಗೃತಿ: ಕಡಲೆ ಹಿಟ್ಟಿನ ಪಾಕೇಟ್ ವಿತರಣೆ

0
1

ಬಾಗಲಕೋಟೆ(ಕುಳಗೇರಿ ಕ್ರಾಸ್): ಪುಣ್ಯ ಕ್ಷೇತ್ರಗಳಲ್ಲಿ ಶಾಂಪೂ, ಸಾಬೂನು ಸೇರಿದಂತೆ ಪರಿಸರಕ್ಕೆ ಹಾನಿಕಾರಕವಾದ ವಿಷಕಾರಿ ವಸ್ತುಗಳನ್ನ ಬಳಸಬೇಡಿ. ಇದರಿಂದ ಜಲಚರ ಪ್ರಾಣಗಳು ನಾಶವಾಗುತ್ತಿವೆ ಎಂದು ಭೈರನಹಟ್ಟಿ-ಶಿರೋಳ ಶಾಂತಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಗೋವನಕೊಪ್ಪ ಗ್ರಾಮದ ಮಲಪ್ರಭಾ ನದಿಯಲ್ಲಿ ಸಂಕ್ರಾಂತಿ ಅಂಗವಾಗಿ ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಅರ್ಗಾನಿಕ್ ಅರಮನೆ, ಭಾರತೀಯ ಕಿಸಾನ್ ಸಂಘ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನದಿ ಸರೋವರಗಳಲ್ಲಿ ಉಟ್ಟ ಬಟ್ಟೆ ಬಿಸಾಡೋದು, ಶಾಂಪೂ-ಸಾಬೂನು ಹಾಕಿ ಪವಿತ್ರ ನೀರನ್ನು ಕಲುಷಿತಗೊಳಿಸಿ ಪರಿಸರ ಹಾಳು ಮಾಡುವುದನ್ನ ತಡೆಯಬೇಕು ಎಂದು ಭಕ್ತರಿಗೆ ಕಡಲೆ ಹಿಟ್ಟಿನ ಪಾಕೇಟ್ ವಿತರಿಸಿ ಪರಿಸರದ ಪಾಠ ಮಾಡಿದರು. ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಉಚಿತ ಕಡಲೆ ಹಿಟ್ಟಿನ ಪಾಕೇಟ್ ವಿತರಿಸಿ ಪರಿಸರ ಜಾಗೃತಿ ಮೂಡಿಸುತ್ತಿರುವ ವರದಶ್ರೀ ಫೌಂಡೇಶನ್‌ ಕಾರ್ಯವನ್ನ ಶ್ಲಾಘಿಸಿದರು. ಕಡಲೆಹಿಟ್ಟು ಬಳಸುವುದರಿಂದ ನಮ್ಮ ಆರೋಗ್ಯದ ಜೊತೆಗೆ ಪರಿಸರ ಕಾಪಾಡಬಹುದು ಎಂದರು.