Home ನಮ್ಮ ಜಿಲ್ಲೆ ಬಾಗಲಕೋಟೆ ನೀತಿ ಸಂಹಿತೆ: ಇಳಕಲ್‌ನಲ್ಲಿ ಪೊಲೀಸ್‌ ಹದ್ದಿನಕಣ್ಣು

ನೀತಿ ಸಂಹಿತೆ: ಇಳಕಲ್‌ನಲ್ಲಿ ಪೊಲೀಸ್‌ ಹದ್ದಿನಕಣ್ಣು

0

ಬಾಗಲಕೋಟೆ(ಇಳಕಲ್): ನಗರದ ಮೂರು ಗಡಿ ಭಾಗಗಳಲ್ಲಿ ಪೋಲಿಸರು ಚೆಕ್‌ಪೋಸ್ಟ್‌ಗಳನ್ನು ಮಾಡಿದ್ದು ಅಲ್ಲಿ ಪೊಲೀಸ್ ಹದ್ದಿನಕಣ್ಣಿಡಲು ವ್ಯವಸ್ಥೆ ಆಗಿದೆ. ಶಹರ್ ಪೋಲಿಸ್ ಠಾಣೆಯ ವತಿಯಿಂದ ಶ್ರೀನಿವಾಸ್‌ ಚಿತ್ರಮಂದಿರದ ಹತ್ತಿರದಲ್ಲಿ ಹೂಲಗೇರಿ ಗ್ರಾಮಕ್ಕೆ ಹೋಗುವ ಕ್ರಾಸ್ ಬಳಿ ಚೆಕ್‌ಪೋಸ್ಟ್ ಮಾಡಲಾಗಿದೆ. ಅಲ್ಲಿ ಹೋಗಿ ಬರುವ ಎಲ್ಲಾ ವಾಹನಗಳ ತಪಾಸಣೆಯನ್ನು ಪೋಲಿಸರು ಮಾಡುತ್ತಿದ್ದಾರೆ. ಅದೇ ರೀತಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಗುಗಲಮರಿ ಗ್ರಾಮದ ಬಳಿ ಮತ್ತು ನಂದವಾಡಗಿ ಗ್ರಾಮದ ಬಳಿ ಚೆಕ್‌ಪೋಸ್ಟ್ ಮಾಡಲಾಗಿದೆ.

Exit mobile version