ಬಾಗಲಕೋಟೆ: ಬಾಗಲಕೋಟೆಯಿಂದ ದೇವರ ದರ್ಶನಕ್ಕೆಂದು ತಿರುಪತಿಗೆ ಹೋಗಿದ್ದ ಜಿಲ್ಲೆಯ ಕಲಾದಗಿ ಗ್ರಾಮದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮಂಗಳವಾರ ಮುಂಜಾನೆ ತಿರುಪತಿಯಿಂದ ಕಲಾದಗಿ ಕಡೆಗೆ ಬರುವಾಗ ರೈಲಿನಲ್ಲಿ ಹೃದಯಘಾತವಾಗಿದೆ.
ಸಾವನ್ನಪ್ಪಿರುವ ಯುವಕನನ್ನು ಕಲಾದಗಿಯ ಕಟ್ಟಡ ಕಾರ್ಮಿಕ ಯಲ್ಲಪ್ಪ ಅಡಗಲ್ಲ (35) ಎಂದು ಗುರುತಿಸಲಾಗಿದೆ. ತಿರುಪತಿಯನ್ನು ಬೆಳಗ್ಗೆ 6 ಗಂಟೆಗೆ ಬಿಡುವ ತಿರುಪತಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನಲ್ಲಿ ಆಗಮಿಸುವಾಗ ಮುಂಜಾನೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ.
ಸದ್ಯ ಯುವಕನ ಶವವನ್ನು ಆಂಧ್ರ ಪ್ರದೇಶದ ನಂದನೂರು ರೈಲ್ವೆ ನಿಲ್ದಾಣದಲ್ಲಿ ಇಡಲಾಗಿದೆ. ರೈಲ್ವೆ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ.