37 ವರ್ಷಗಳ ಕಾಲ ದೇಶ ಸೇವೆ; ಬಿಎಸ್ಎಫ್‌ ಅಧಿಕಾರಿ ಸ್ವಾಗತಿಸಿದ ಗ್ರಾಮಸ್ಥರು

0
14
ಬೆಳಗಾವಿ

ಬೆಳಗಾವಿ: ದೇಶದ ಗಡಿಯಲ್ಲಿ 37 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ ಬಿಎಸ್ಎಫ್ ಅಧಿಕಾರಿಯನ್ನು ಗ್ರಾಮಸ್ಥರು ಸ್ವಾಗತ ಮಾಡಿಕೊಂಡರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದ ಬಸವರಾಜ ಹಡಗಿನಾಳ ಅವರು ಬಿಎಸ್ಎಫ್‌ನಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸ್ವಯಂ ನಿವೃತ್ತಿ ವೇಳೆ ಅವರು ಇನ್ಸ್‌ಪೆಕ್ಟರ್ ಆಗಿದ್ದರು. ಸ್ವಯಂ ನಿವೃತ್ತಿಯ ಬಳಿಕ ಅವರಿಂದು ಸ್ವಗ್ರಾಮಕ್ಕೆ ಮರಳಿದರು. ಮೇಕಲಮರಡಿ ಗ್ರಾಮಕ್ಕೆ ಬರುತ್ತಿದ್ದಂತೆ ಹೂಮಳೆಗೈದು ಗ್ರಾಮಸ್ಥರು ಬರಮಾಡಿಕೊಂಡರು. ಬಳಿಕ ಬಸವರಾಜ್ ಹಡಗಿನಾಳ ದಂಪತಿಯನ್ನು ತೆರೆದ ವಾಹನದಲ್ಲಿ ಗ್ರಾಮಸ್ಥರು ‌ಮೆರವಣಿಗೆ ಮಾಡಿ, ಸತ್ಕರಿಸಿದರು. ಇದೆ ವೇಳೆ ಗ್ರಾಮದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ಹುತಾತ್ಮ ಯೋಧನ ಪುತ್ಥಳಿಗೆ ಬಸವರಾಜ್ ಅವರು ಪುಷ್ಪನಮನ ಸಲ್ಲಿಸಿದರು. ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್, ಅಸ್ಸಾಂ ಸೇರಿದಂತೆ ವಿವಿಧೆಡೆ ಸಲ್ಲಿಸಿದ ಸೇವೆಯನ್ನು ಬಸವರಾಜ್ ಹಡಗಿನಾಳ ಅವರು ಸ್ಮರಿಸಿದರು. ಬಳಿಕ‌ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮಸ್ಥರು ಕೂಡ‌ ಬಸವರಾಜ್ ದಂಪತಿಯನ್ನು ಸನ್ಮಾನಿಸಿದರು.

ಬೆಳಗಾವಿ
Previous articleಡಿಕೆಶಿ ಅಕ್ರಮ ಆಸ್ತಿ ಪ್ರಕರಣ: ಏ. 13ರವರೆಗೆ ತಡೆಯಾಜ್ಞೆ ವಿಸ್ತರಣೆ
Next articleಯಾದಗಿರಿ: ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ