ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾರ್ಚ್ 20 ರಿಂದ ವಿಶೇಷ ಎಕ್ಸ್ ಪ್ರೆಸ್ ರೈಲು

0
14

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾರ್ಚ್ 20 ರಿಂದ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಕಾಯ್ದಿರಿಸಿದ ವಿಶೇಷ ಸೇವೆಯ ಈ ರೈಲುಗಳು ಇದೆ ಮಾರ್ಚ್ 20 ರಿಂದ ತಮ್ಮ ಸಂಚಾರ ಆರಂಭಿಸಲಿವೆ. ರಾತ್ರಿ 11:15ಕ್ಕೆ ಹುಬ್ಬಳ್ಳಿಯಿಂದ ( ರೈಲು ಸಂ : 07339) ಹೊರಡುವ ರೈಲು ಬೆಳಗ್ಗೆ 6:50ಕ್ಕೆ ಬೆಂಗಳೂರು ತಲುಪಲಿದೆ. ಹಾಗೂ ಬೆಂಗಳೂರಿನಿಂದ ರಾತ್ರಿ 11:15ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ. ಮತ್ತೊಂದು ರೈಲು ಬೆಳಗ್ಗೆ 7:45ಕ್ಕೆ ಬೆಂಗಳೂರಿನಿಂದ(ರೈಲು ಸಂ : 07353) ಹೊರಟು ಮಧ್ಯಾಹ್ನ 2:30ಕ್ಕೆ ಹುಬ್ಬಳ್ಳಿ ತಲುಪಲಿದೆ ಹಾಗೂ ಹುಬ್ಬಳ್ಳಿಯಿಂದ(ರೈಲು ಸಂ : 07354) 3:15ಕ್ಕೆ ಹೊರಡುವ ರೈಲು ರಾತ್ರಿ 11:10ಕ್ಕೆ ಬೆಂಗಳೂರು ತಲುಪಲಿದೆ ಈ ಎರಡು ರೈಲುಗಳು ಕರ್ಜಗಿ, ದಾವಣಗೆರೆ, ಬೀರೂರು, ತುಮಕೂರು ಹಾಗೂ ಯಶವಂತಪುರ ಮಾರ್ಗವಾಗಿ ಸಂಚರಿಸಲಿವೆ. ಎಂದಿದ್ದಾರೆ ತಮ್ಮ ಟ್ವೀಟನಲ್ಲಿ ಕೋರಿಕೆಗೆ ಸ್ಪಂದಿಸಿ ರೈಲು ಸಂಚಾರ ಆರಂಭಿಸಲು ಆದೇಶ ನೀಡಿದ ಕೇಂದ್ರ ರೈಲು ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಅನಂತ ಧನ್ಯವಾದಗಳು ಎಂದಿದ್ದಾರೆ.

Previous articleಇದು ಆರಂಭ ಅಷ್ಟೇ: WPL​ ಗೀತೆ ಬಿಡುಗಡೆ
Next articleWPL 2023 ಮಹಿಳಾ ಐಪಿಎಲ್‌ಗೆ ಚಾಲನೆ