ಹುಬ್ಬಳ್ಳಿಯಿಂದ ಮುಂಬೈಗೆ ಏರ್‌ಬಸ್ ವಿಮಾನ‌ ಸೇವೆ

0
20


ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಮುಂಬೈಗೆ ಈ‌ ಹಿಂದೆ ಎಟಿಆರ್ ವಿಮಾನ ಸಂಚರಿಸುತ್ತಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 186 ಆಸನಗಳ ವ್ಯವಸ್ಥೆ ಇರುವ ವಿಮಾನ ಆರಂಭಿಸುವಂತೆ ಇಂಡಿಗೋ ಸಂಸ್ಥೆಗೆ ವಿನಂತಿಸಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿನಂತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಸಂಸ್ಥೆ ನೂತನ ವಿಮಾನಸೇವೆ ಆರಂಭಿಸಿದೆ.
ಛೋಟಾ ಮುಂಬೈ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಿಂದ ಮುಂಬೈಗೆ ತೆರಳುವ ಪ್ರಯಾಣಿಕರ ಪ್ರಯಾಣ ಇನ್ನು ಮುಂದೆ ಸುಖಕರವಾಗಲಿದೆ.
ನಾಳೆಯಿಂದ ವಿಂಟರ್ ಶೆಡ್ಯೂಲ್ ಆರಂಭವಾಗಲಿದ್ದು, ಮುಂಬೈ – ಹುಬ್ಬಳ್ಳಿ (6E 936): ಮುಂಬೈನಿಂದ ನಿರ್ಗಮನ: 12:00 ಪಿಎಂ, ಹುಬ್ಬಳ್ಳಿಗೆ ಆಗಮನ: 1:15 ಪಿಎಂ ಆಗಿದೆ.
ಹುಬ್ಬಳ್ಳಿ – ಮುಂಬೈ (6E 937): ಹುಬ್ಬಳ್ಳಿಯಿಂದ ನಿರ್ಗಮನ: 1:45 ಪಿಎಂ, ಮುಂಬೈಗೆ ಆಗಮನ: 2:40 ಪಿಎಂ ಗೆ ತಲುಪಲಿದೆ ಎಂದು ಸಚಿವ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleಕಾವೇರಿ ಹೋರಾಟಕ್ಕೆ ಡೊಳ್ಳಿನ ಸದ್ದು
Next articleನಮ್ಮದು ಪಾರದರ್ಶಕ ಆಡಳಿತ