ರಾಯಚೂರು: ಸನಾತನ ಧರ್ಮಕ್ಕೆ ರೋಗ ಬಂದಿಲ್ಲ. ಸನಾತನ ಧರ್ಮದ ಬಗ್ಗೆ ಮಾತನಾಡುವರಿಗೆ ಕುಷ್ಠ ರೋಗ, ಏಡ್ಸ್ ಹತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ,
ಮೊಗಲರು ಎಷ್ಟು ವರ್ಷ ನಮ್ಮ ದೇಶ ಆಳಿದ್ದರು. ಔರಂಗಜೇಬ್ ನಂಥ ಮತಾಂಧ ರಾಜನಿಗೂ ಭಾರತವನ್ನ ಇಸ್ಲಾಮಿಕರಣ ಮಾಡಲು ಆಗಲಿಲ್ಲ. ಮೊಹಮ್ಮದ್ ಘೋರಿ, ಘಜ್ನಿ ದಾಳಿ ಮಾಡಿದ್ರೂ ಏನು ಆಗಲಿಲ್ಲ. ಒಬ್ಬ ಮಂತ್ರಿ ಹೇಳುತ್ತಾರೆ ಸನಾತನ ಧರ್ಮ ಹುಟ್ಟು ಎಲ್ಲಿ ಅಂತ? ಆ ಮಂತ್ರಿಗೆ ಅವರ ಹುಟ್ಟೇ ಅವರಿಗೆ ಗೊತ್ತಿಲ್ಲ. ಇನ್ನೂ ಸನಾತನ ಧರ್ಮದ ಬಗ್ಗೆ ಏನು ಪ್ರಶ್ನೆ ಮಾಡುತ್ತಾರೆ ಎಂದರು.
ಇವರಿಗೆ ಧಮ್, ತಾಕತ್ ಇದ್ದರೆ ಇಸ್ಲಾಂ ಧರ್ಮ ಮತ್ತು ಕ್ರಿಸ್ತನ್ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಲಿ. ಕರುಣಾನಿಧಿ ಯಾರು ಅವನು ಸನಾತನ ಧರ್ಮದಲ್ಲಿಯೇ ಹುಟ್ಟಿದವನು. ಕೆಟ್ಟ ಹುಳುಗಳು ಈಗ ಹೊರಗೆ ಬರುತ್ತಿವೆ. ಡಿಎಂಕೆ ನಾಶವಾಗಲಿದೆ. ಮೊದಲಿನಂತೆ ತಮಿಳುನಾಡು ಉಳಿದಿಲ್ಲ ಎಂದರು.
ಸನಾತನ ಧರ್ಮಕ್ಕೆ ಯಾರು ಸ್ಥಾಪಕರೇ ಇಲ್ಲ: ಸನಾತನ ಧರ್ಮಕ್ಕೆ ಕೊನೆಯೇ ಇಲ್ಲ. ಸನಾತನ ಧರ್ಮ ಅನಂತ. ಸನಾತನ ಧರ್ಮ ಈ ದೇಶದ ಸಂಸ್ಕೃತಿ. ಐದು ಸಾವಿರ ವರ್ಷಗಳ ಹಿಂದೆ ರಾಮಾಯಣ ಘಟಿಸಿದೆ. 3.5 ಸಾವಿರ ವರ್ಷಗಳ ಹಿಂದೆ ಮಹಾಭಾರತ ಆಗಿದೆ. ಸನಾತನ ಧರ್ಮದ ಮೂಲ ಹುಡುಕಲು ಯಾರಿಗೂ ಸಾಧ್ಯವಿಲ್ಲ. ಸನಾತನ ಧರ್ಮ ದೇವರ ಸೃಷ್ಟಿಯಾಗಿದೆ ಎಂದರು. ನಮ್ಮ ದೇಶದ ಸಂವಿಧಾನ ಉಳಿಯಬೇಕು ಅಂದ್ರೆ ಸನಾತನ ಉಳಿಯಬೇಕು. ಭಾರತವಾದ್ರೆ ಇಸ್ಲಾಮಿಕರಣ ಸಂವಿಧಾನವೇ ಹೋಗಿಬಿಡುತ್ತೆ. ಅವರದೇ ಆಡಳಿತ ಬರುತ್ತೆ. ಜಿಹಾದ್ ಬರುತ್ತೆ. ಪಾಕಿಸ್ತಾನದಲ್ಲಿ ಮೀಸಲಾತಿ ಇದೆಯೇ? ಜಮ್ಮು ಕಾಶ್ಮೀರದಲ್ಲಿ ಕಲಂ 370 ಜಾರಿಗೆ ಮಾಡುವ ಮುನ್ನ ಮೀಸಲಾತಿ ಇರಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಮೋದಿಯವರು ತಂದಿರುವ ಆರ್ಟಿಕಲ್ 370ರಿಂದ ದಲಿತರಿಗೆ ಚುನಾವಣೆಗೆ ಅವಕಾಶ ಸಿಕ್ಕಿದೆ. ಕಾಶ್ಮೀರದಲ್ಲಿ ಬಾಬಾ ಸಾಹೇಬ್ ರ ನಂತರ ಮೀಸಲಾತಿ ಕೊಟ್ಟವರು ಪ್ರಧಾನಿ ಮೋದಿ. ಬಾಬಾ ಸಾಹೇಬರು ಸನಾತನ ಧರ್ಮ ನಾಶವಾಗಬೇಕು ಎಂದು ಹೇಳಿಲ್ಲ. ಈಗ ಹೇಳಿಕೆ ನೀಡುವವರೇ ಸನಾತನ ಧರ್ಮಕ್ಕೆ ಕಾನ್ಸರ್ ಇದ್ದಂತೆ ಎಂದಿದ್ದಾರೆ.