Home ನಮ್ಮ ಜಿಲ್ಲೆ ಶೀಘ್ರ ಉಪಗ್ರಹ ಉಡಾವಣೆ: ಡಾ. ಶಿವನ್

ಶೀಘ್ರ ಉಪಗ್ರಹ ಉಡಾವಣೆ: ಡಾ. ಶಿವನ್

0

ಬಾಗಲಕೋಟೆ: ಭೂಮಿಯ ಸಮಗ್ರ ಅಧ್ಯಯನ ಹಾಗೂ ವೀಕ್ಷಣೆಗೆ ಶೀಘ್ರದಲ್ಲಿಯೇ ಮತ್ತೊಂದು ಉಪಗ್ರಹವೊಂದು ಉಡಾವಣೆಯಾಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಶಿವನ್ ಸುಳಿವು ನೀಡಿದ್ದಾರೆ.
ಬಾಗಲಕೋಟೆ ಬಸವೇಶ್ವರ ಇಂಜನೀಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ನಾಸಾ ಸಹಯೋಗದೊಂದಿಗೆ ಇದರ ಉಡಾವಣೆಯಾಗಲಿದೆ. ಇದೊಂದು ಮಹತ್ವದ ಸಾಧನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಇದು ಇಸ್ರೋ ಕಾಣಿಕೆ ಎಂದು ಹೇಳಿದ ಅವರು ವಿದ್ಯಾರ್ಥಿಗಳು ಹೆಚ್ಚು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಉದ್ಯೋಗ ಆಕಾಂಕ್ಷಿಗಳಾಗುವ ಬದಲು ಉದ್ಯೋಗದಾತರಾಗಬೇಕೆಂದು ಸಲಹೆ ನೀಡಿದರು.

Exit mobile version