ಶಿವಾಜಿ ಮೂರ್ತಿ ತೆರವು ಅಕ್ಷಮ್ಯ ಅಪರಾಧ

0
15

ಇಳಕಲ್: ಬಾಗಲಕೋಟೆ ನಗರದಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಗೆ ವಿರೋಧಿಸಿ ಅದನ್ನು ತೆರವುಗೊಳಿಸಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು. ಶುಕ್ರವಾರದಂದು ಸುದ್ದಿಗೋಷ್ಠಿ ನಡೆಸಿದ ಅವರು ಹುನಗುಂದ ವಿಧಾನಸಭೆ ಮತಕ್ಷೇತ್ರದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮತ್ತು ಜೂಜಾಟ ಕೇಂದ್ರಗಳು ಶಾಸಕರ ಕುಮ್ಮಕ್ಕಿನಿಂದಾಗಿ ನಡೆಯುತ್ತಿವೆ ಅವುಗಳನ್ನು ಹತ್ತಿಕ್ಕಲು ಪೋಲಿಸರು ಸಹ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದರು. ಶಾಸಕರು ಯಾವುದೇ ಹೊಸ ಕಾಮಗಾರಿ ತರದೇ ಕೇವಲ ನನ್ನ ಆಡಳಿತದಲ್ಲಿ ತಂದ ಕಾಮಗಾರಿಯನ್ನು ಮತ್ತೇ ಅಡಿಗಲ್ಲು ಹಾಕುವದು ಭೂಮಿ ಪೂಜೆ ಮಾಡುವದು ನಡೆದಿದೆ ಶಾಸಕರು ತಮ್ಮದೇ ಆದ ಹೊಸ ಆಡಳಿತವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದು ಇಲ್ಲಿ ಗುಂಡಾ ರಾಜ್ಯ ನಿರ್ಮಾಣವಾಗುತ್ತಿದೆ ಎಂದು ಕಟುವಾಗಿ ಟೀಕಿಸಿದರು. ಕೂಡಲೇ ಸರಕಾರ ಇತ್ತ ಗಮನಹರಿಸಿ ಅವುಗಳನ್ನು ನಿಯಂತ್ರಿಸದೇ ಹೋದರೆ ಕ್ಷೇತ್ರದ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಇದು ತಪ್ಪಬೇಕು ಎಂದ ಅವರು, ಮತದಾರರು ಗ್ಯಾರಂಟಿ ಕಾರಣದಿಂದಾಗಿ ಮತ ಹಾಕಿ ಈಗ ಪರಿತಪಿಸುವಂತಾಗಿದೆ ಎಂದು ಹೇಳಿದರು ಸುದ್ದಿಗೋಷ್ಠಿಯಲ್ಲಿ ಅರವಿಂದ ಮಂಗಳೂರು, ಲಕ್ಷ್ಮಣ ಗುರಂ ಮಂಜುನಾಥ ಶೆಟ್ಟರ , ಗಣೇಶ ಯರಡೋಣಿ ಸದಾಶಿವ ಕನಕೇರಿ ಲಕ್ಷ್ಮೀ ಬಾಯಿ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.

Previous articleಭೂ ಸ್ವಾಧೀನ ಅಧಿಕಾರಿ ಉಮೇಶ್ ಬಂಧನ
Next articleಕನ್ನಡ ಚಿತ್ರರಂಗಕ್ಕೆ ಶುಭ ಹಾರೈಸಿದ ಸಿಎಂ