ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ೮ ಪಟ್ಟು ಹೆಚ್ಚಳ

0
17

ಹುಬ್ಬಳ್ಳಿ: ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಪ್ರವಾಸಿಗರ ಸಂಖ್ಯೆ ೮ ಪಟ್ಟು ಹೆಚ್ಚಿದೆ ಎಂದು ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಉತ್ತರ ಕರ್ನಾಟಕದ ಹಲವು ಸ್ಥಳಗಳಿಗೆ ತೆರಳುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಮೊದಲು ಮೂಲಭೂತ ಸೌಕರ್ಯ ಕೊರತೆ ಇತ್ತು. ಅದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರವಾಸೋದ್ಯಮಕ್ಕೆ ಹೊಸ ನೀತಿಯನ್ನು ತರಲಾಗುವುದು ಎಂದರು.
ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ಆಮಿಷ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಪರೇಷನ್ ಕಮಲದಂತಹ ನೀಚ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಆಪರೇಷನ್ ಕಮಲದಿಂದ ಈಗಾಗಲೇ ಅವರು ಬುದ್ಧಿ ಕಲಿತಿದ್ದಾರೆ. ರಾಷ್ಟçದಲ್ಲೇ ಅವರ ಮರ್ಯಾದೆ, ಪ್ರಭಾವ ಇಳಿದು ಹೋಗಿದೆ ಎಂದು ಕುಟುಕಿದರು.
ಸಚಿವ ಸಂಪುಟ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರು ಹೇಳಿದ್ದಾರೋ ಅವರಿಗೆ ಗೊತ್ತು. ಡಿ.ಕೆ.ಶಿವಕುಮಾರ ಸಿಎಂ ಆಗುವ ವಿಚಾರ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಇದು ಮಾಧ್ಯಮದಲ್ಲಿ ಚರ್ಚೆ ಮಾಡುವ ವಿಚಾರವಲ್ಲ. ಹೈಕಮಾಂಡ್, ಪಕ್ಷದ ನಾಯಕರಿದ್ದಾರೆ ಅವರ ಹತ್ತಿರ ಕುಳಿತೇ ಚರ್ಚೆ ಮಾಡಬೇಕು ಎಂದರು.

Previous articleಪುನೀತ್‌ ೨ನೇ ಪುಣ್ಯಸ್ಮರಣೆ
Next articleಕೇಂದ್ರಕ್ಕೆ ಸಿದ್ದು ಸರಕಾರದಿಂದ ಅಸಹಕಾರ