ವೋಟರ್ ಲಿಸ್ಟ್: ಚುನಾವಣಾ ಆಯೋಗಕ್ಕೆ ದೂರು ನೀಡಲು ಜೆಡಿಎಸ್ ನಿರ್ಧಾರ

0
15
kumar Swami

ಕೋಲಾರ: ರಾಜ್ಯದಲ್ಲಿ ವೋಟರ್ ಲಿಸ್ಟ್ ಕೇಸ್ ವಿಚಾರವಾಗಿ ಮಾತನಾಡಿದ ಕೋಲಾರದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿ ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ ಸರ್ಕಾರವೇ ಪ್ರಕರಣದಲ್ಲಿ ಭಾಗಿಯಾದಾಗ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ, ಚುನಾವಣಾ ಆಯೋಗ ಈ ವಿಚಾರದಲ್ಲಿ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಹೆಸರಿಗೆ ಹೆಬ್ಬೆಟ್ಟಾದಂತೆ ಆಯೋಗ ಆಗಲಿದೆ ಎಂದರು, ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಈ ಹಿನ್ನೆಲೆ ನಾಳೆ ಜೆಡಿಎಸ್ ಪಕ್ಷದಿಂದ ಬಿಜೆಪಿ ವಿರುದ್ದ ಪ್ರತಿಭಟನೆ ಮೂಲಕ ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ನೀಡಲು ಜೆಡಿಎಸ್ ನಿರ್ಧಾರ ಮಾಡಿದೆ, ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ರಾಜಕೀಯ ಬೆಳವಣಿಗೆ ಬಗ್ಗೆ ತೆಲಂಗಾಣ ಸಿಎಂ ಸಾಕ್ಷ್ಯ ಸಮೇತ ಮಾಹಿತಿ ನೀಡಿದ್ದಾರೆ ಇವರಿಗೆ ಜನಬೆಂಬಲ ಇಲ್ಲ, ಹಣಬಲ, ಕುತಂತ್ರದಿಂದ ಅಧಿಕಾರ ಹಿಡಿಯಲು ಹೋಗುತ್ತಿದ್ದಾರೆ, ನಮ್ಮ ರಾಜ್ಯದಲ್ಲಿ ವೋಟರ್ ಐಡಿ ಪ್ರಕರಣ ಗಂಭೀರವಾದದ್ದು ಮತದಾರರ ಮಾಹಿತಿ ಸಂಗ್ರಹಿಸಿ, ಓಟು ಹಾಕುವ ಅಮಾಯಕರ ಮಾಹಿತಿ ಪಡೆದು ಡಿಲೀಟ್ ಮಾಡಲಾಗುತ್ತಿದೆ ಎಂದು ಕೋಲಾರದ ಮಾಗೇರಿ ಗ್ರಾಮದಲ್ಲಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.

Previous articleಮಂಗಳೂರು ಸ್ಫೋಟ ಪ್ರಕರಣ: ತುಮಕೂರು, ಮೈಸೂರು, ಹುಬ್ಬಳ್ಳಿಯಲ್ಲಿ ತನಿಖೆ
Next articleಬೆಳಗಾವಿಯಲ್ಲಿ 3 ದಿನ ಅದ್ಧೂರಿ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ