ವಿದ್ಯುತ್ ಶಾಕ್: ತಂದೆ ಮಗ ದುರಂತ ಸಾವು

0
22

ಉಡಕೇರಿ: ಮನೆಯ ಮುಂದಿನ ವಿದ್ಯುತ್ ಕಂಬ ಸ್ಪರ್ಷಿಸಿ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ಸಾವಿಗೀಡಾದ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಪ್ರಭಾಕರ ಹುಂಬಿ (71) ಮೃತ ದುರ್ದೈವಿ. ಮಂಜು ಹುಂಬಿ (31) ಮೃತರು.
ಮನೆಯ ಪಕ್ಕದಲ್ಲಿ ದನದ ಕೊಟ್ಟಿಗೆ ಇದ್ದು, ಪ್ರಭಾಕರ ಬೆಳಗ್ಗೆ ಎದ್ದು ಆಕಳು ಕರುವಿಗೆ ಕಾಳು ತಿನಿಸಲು ಹೋಗಿದ್ದು, ಈ ವೇಳೆ ಮನೆಗೆ ಹೊಂದಿಕೊಂಡಿದ್ದ ವಿದ್ಯುತ್ ಕಂಬದ ಗೈಯ (ತಂತಿ) ಹಿಡಿದಿದ್ದಾನೆ. ಕಂಬಕ್ಕೆ ಸಪೋರ್ಟ್ ಆಗಿ ನಿಲ್ಲಿಸಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಶಾಕ್‌ಗೆ ಒಳಗಾಗಿದ್ದಾನೆ. ಇದನ್ನು ಕಂಡ ಮಗ ಮಂಜು ತಂದೆಯ ಸಹಾಯಕ್ಕೆ ಧಾವಿಸಿದ್ದು, ಆತನಿಗೂ ಶಾಕ್ ಹೊಡೆದಿದೆ. ಪ್ರಭಾಕರ ಸ್ಥಳದಲ್ಲೇ ಮೃತಪಟ್ಟರೆ, ಮಗ ಮಂಜು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಗುರುವಾರ ರಾತ್ರಿ ಸ್ವಲ್ಪ ಮಳೆಯಾಗಿದ್ದ ಕಾರಣ ವಿದ್ಯುತ್ ಕಂಬಕ್ಕೆ ಸಪೋರ್ಟ್ ಆಗಿ ಹಾಕಿದ್ದ ತಂತಿಗೆ ವಿದ್ಯುತ್ ಪ್ರವಹಿಸಿದ್ದರಿಂದ ಅವಘಡ ಸಂಭವಿಸಿದೆ. ಈ ಅವಘಡಕ್ಕೆ ಹೆಸ್ಕಾಂ ನಿರ್ಲಕ್ಷವೇ ಕಾರಣ. ಮನೆಗೆ ಹೊಂದಿಕೊಂಡು ವಿದ್ಯುತ್ ಕಂಬ ನಿಲ್ಲಿಸಿದ್ದು ಕಾನೂನು ಬಾಹಿರ. ಹೆಸ್ಕಾಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Previous articleಎನ್‌ಪಿಎಸ್ ಬಿಟ್ಟು ಓಪಿಎಸ್ ಜಾರಿಗೆ ಆಗ್ರಹ: ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ರ‍್ಯಾಲಿ
Next articleವಿಜಯನಗರ: ಲಾರಿ-ಮಿನಿಲಾರಿ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು