Home ನಮ್ಮ ಜಿಲ್ಲೆ ರೈಲಿನಲ್ಲಿ ಪ್ರಜ್ಞೆ ತಪ್ಪಿಸಿ ಕಳ್ಳತನ

ರೈಲಿನಲ್ಲಿ ಪ್ರಜ್ಞೆ ತಪ್ಪಿಸಿ ಕಳ್ಳತನ

0

ಬೆಳಗಾವಿ : ಗೋವಾದಿಂದ ದೆಹಲಿ ನಿಜಾಮುದ್ದಿನ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪ್ರಜ್ಣೆ ತಪ್ಪಿಸಿ ದೋಚಿರುವ ಘಟನೆ ವರದಿಯಾಗಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ 8ಮಂದಿ ಪ್ರಯಾಣಿಕರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವ ಈ 8 ಜನ ಪ್ರಯಾಣಿಕರು ಬಿಹಾರ ಮೂಲದವರು ಎಂದು ತಿಳಿದು ಬಂದಿದ್ದು, ಇವರೆಲ್ಲರು ಗೋವಾದಿಂದ ರೈಲಿನಲ್ಲಿ ದೆಹಲಿ ಕಡೆಗೆ ಹೊರಟ್ಟಿದ್ದರು ಎನ್ನಲಾಗಿದೆ.

ಆದರೆ ಬೆಳಗಾವಿ ಸಮೀಪ ಬರುತ್ತಿದ್ದಂತೆ 8 ಪ್ರಯಣಿಕರು ಪ್ರಮುಖ ಪ್ರಜ್ಣಾಹೀನರಾಗಿರುವುದು ಪತ್ತೆಯಾಗಿದ್ದು, ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಇವರಿಗೆ ಪ್ರಜ್ಣೆ ತಪ್ಪಿಸಿ ದೋಚಿರುವ ಶಂಕೆ ವ್ಯಕ್ತವಾಗಿದ್ದು, ಇವರಿಗೆ ಪ್ರಜ್ಣೆ ಬಂದ ನಂತರವಷ್ಟೆ ನಿಜಾಂಶ ತಿಳಿಯಲಿದೆ.‌
ರೈಲು ಯಾತ್ರೆಯ ವೇಳೆ ಅಪರಿಚಿತರಿಂದ ಯಾವುದೇ ಆಹಾರ ಸೇವನೆ ಮಾಡದಂತೆ ಹಲವು ಬಾರಿ ಸೂಚನೆ ನೀಡುತ್ತಿದ್ದರೂ ಕೆಲವರು‌ ಇದನ್ನು ಕಡೆಗಣಿಸಿ ಅಪರಿಚಿತರ ಆಹಾರ ಸೇವನೆ ಮಾಡುವುದರಿಂದಲೆ ಇಂತಹ ಘಟನೆ ಮರಕರುಳಿಸುತ್ತಿದೆ ಎನ್ನಲಾಗಿದೆ.

Exit mobile version