ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವು

0
18
ಎಲೆಕ್ಟ್ರಾನಿಕ್ ಸಿಟಿ

ಬೆಂಗಳೂರಿನಲ್ಲಿ ಫ್ಲೈಓವರ್​ ಮೇಲಿಂದ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶ ಮೂಲದ ಕೊರೆ ನಾಗರಾಜು(33) ಮೃತ ಬೈಕ್​​ ಸವಾರ. ಮೇಲ್ಸೇತುವೆಯ ಇಳಿಜಾರಿನ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಸೇಂಟ್ ಜಾನ್ಸ್ ಆಸ್ಪತ್ರೆ ಗೆ ರವಾನೆ ಮಾಡಿದ್ದಾರೆ.

Previous article15 ದಿನಗಳಲ್ಲಿ ಒಂದು ಕೋಟಿ ಕಾರ್ಡ್ ವಿತರಣೆ
Next articleಫಿಲಿಪ್ಸ್ 4,000 ಉದ್ಯೋಗ ಕಡಿತ : ಜಾಕೋಬ್ಸ್