ಮಹಿಳೆ ಜೊತೆಗೆ ವಾಗ್ವಾದ: ನಿರ್ವಾಹಕರಿಗೆ ಬಿದ್ದ ಏಟು

0
12

ಇಳಕಲ್: ಶಕ್ತಿ ಯೋಜನೆಯಲ್ಲಿ ಮಹಿಳಾ ಪ್ರಯಾಣಿಕರು ರಾಜ್ಯಾದ್ಯಂತ ಸಂಚರಿಸುತ್ತಿರುವ ಈ ಸಮಯದಲ್ಲಿ ನಿರ್ವಾಹಕರೊಬ್ಬರು ಮಹಿಳೆಗೆ ಅಸಹ್ಯವಾಗಿ ಮಾತನಾಡಿ ಗೂಸಾ ತಿಂದ ಘಟನೆ ಶುಕ್ರವಾರ ಇಲ್ಲಿ ನಡೆದಿದೆ.
ಮುದ್ದೇಬಿಹಾಳ ಘಟಕದ ಬೆಂಗಳೂರು-ಮುದ್ದೇಬಿಹಾಳ ಬಸ್ ಹತ್ತಿದ್ದ ಇಳಕಲ್‌ದ ಮಹಿಳೆಯೋರ್ವಳಿಗೆ ನಿರ್ವಾಹಕ ಬಸ್ ಪುಗಸಟ್ಟೆಯಂದು ಇಂತಹ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಹೀಯಾಳಿಸಿ ಮಾತನಾಡಿದನಂತೆ. ಇದರಿಂದ ಆತನ ಜೊತೆಗೆ ಜಗಳ ಕಾಯ್ದ ಮಹಿಳೆ ಈ ಬಗ್ಗೆ ಇಳಕಲ್‌ದ ತನ್ನ ಮನೆಯವರಿಗೆ ಸುದ್ದಿಯನ್ನು ಮೊಬೈಲ್ ಮೂಲಕ ತಲುಪಿಸಿದ್ದಾಳೆ.
ನಗರದ ಬಸ್ ನಿಲ್ದಾಣದಲ್ಲಿ ಕಾಯುತ್ತಾ ನಿಂತ ಮಹಿಳೆಯ ಕಡೆಯವರು ಬಸ್‌ನಿಂದ ನಿರ್ವಾಹಕನನ್ನು ಕೆಳಗಿಳಿಸಿ ಗೂಸಾ ಹಾಕಿದ್ದಾರೆ. ನಿರ್ವಾಹಕ ಕೂಡಲೇ ಬಸ್ ನಿಲ್ದಾಣದ ಎದುರಿನಲ್ಲಿಯೇ ಇರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಪಿಎಸ್‌ಐ ಶಹಜಹಾನ ನಾಯಕ ವಿಚಾರಣೆ ನಡೆಸಿ ಇಬ್ಬರಿಗೂ ತಿಳಿಹೇಳಿ ಸಂಧಾನದ ಮೂಲಕ ಬಗೆಹರಿಸಿ ಕಳಿಸಿದರೆಂದು ತಿಳಿದಿದೆ.

Previous articleಬಿಜೆಪಿ ಅಧಿಕಾರಕ್ಕೆ ತರಲು ವಿಜಯೇಂದ್ರ ಜೊತೆ ಪ್ರವಾಸ
Next articleಯುವಕನ ಕೊಚ್ಚಿ ಕೊಲೆ