ಹುಬ್ಬಳ್ಳಿ : ದೆಹಲಿ ಮತ್ತು ಪಂಜಾಬ್ ನಲ್ಲಿ ಭ್ರಷ್ಟಾಚಾರ ಮುಕ್ತ, ಪ್ರಮಾಣಿಕ ಸರ್ಕಾರವನ್ನು ನೀಡುವುದು ಆಮ್ ಆದ್ಮಿ ಪಕ್ಷದ ಗುರಿಯಾಗಿದೆ. ಈ ಬಗ್ಗೆ ಕರ್ನಾಟಕ ಜನರಿಗೆ ಮನವಿ ಮಾಡುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಹೇಳಿದರು.
ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಸಮಾವೇಶಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿ ಮತ್ತು ಪಂಜಾಬ್ ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ, ಪ್ರಾಮಾಣಿಕ ಸರ್ಕಾರ ಆಮ್ ಅದ್ಮಿ ಪಕ್ಷ ನಡೆಸುತ್ತಿದೆ. ಉಚಿತ ವಿದ್ಯುತ್ ಕಲ್ಪಿಸಲಾಗಿದೆ.ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಈ ಎಲ್ಲ ವಿಷಯಗಳನ್ನು ಕರ್ನಾಟಕದ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು. ಮುಖ್ಯವಾಗಿ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಕುಖ್ಯಾತಿ ಹೊಂದಿದೆ. ಇಂತಹ ಸರ್ಕಾರದಿಂದ ಅಭಿವೃದ್ದಿ ಸಾಧ್ಯವೆ? ಎಂದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಮಾತನಾಡಿ, ಪಂಜಾಬ್‌ನಲ್ಲೂ ಆಮ್ ಆದ್ಮಿ ಸರ್ಕಾರ ಆಡಳಿತಕ್ಕೆ ಬರುವ ಪೂರ್ವ ಕರ್ನಾಟಕದ ಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಭ್ರಷ್ಟಾಚಾರ ಮಿತಿ ಮೀರಿತ್ತು. ಜನ ರೋಸಿ ಹೋಗಿದ್ದರು ಎಂದರು.
ನಮ್ಮ ಪಕ್ಷದ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಮೊದಲು ಸಾರಿದ್ದೆ ಭ್ರಷ್ಟಾಚಾರದ ವಿರುದ್ಧ ಸಮರ. ಕಾಲ್ ಸೆಂಟರ್ ಒಪನ್ ಮಾಡಿ ಯಾರಾದರೂ ಸರ್ಕಾರಿ ಕೆಲಸಕ್ಕೆ ಹಣ ಕೇಳಿದರೆ ಆನ್ ನಲ್ಲಿ ದೂರು ದಾಖಲಿಸುವ ವ್ಯವಸ್ಥೆ ಜಾರಿ ಮಾಡಿದೆವುಮ ಮಂತ್ರಿಯೇ ಇರಲಿ. ಶಾಸಕರೇ ಇರಲಿ. ಅಧಿಕಾರಿಗಳೇ ಇರಲಿಮ ಯಾರ ವಿರುದ್ಧ ಬೇಕಾದರೂ ದೂರು ದಾಖಲಿಸುವ ಅವಕಾಶ ನೀಡಲಾಗಿದೆ. ಈಗ ಭ್ರಷ್ಟಾಚಾರ ಕ್ಲೀನ್ ಆಗಿದೆ. ಕರ್ನಾಟಕದಲ್ಲೂ ಅಂಥದ್ದೇ ಭ್ರಷ್ಟಾಚಾರ ಮುಕ್ತ ಸರ್ಕಾರ ರಚನೆ ನಮ್ಮ ಗುರಿಯಾಗಿದೆ. ಪಂಜಾಬ್ ನಂತೆ ಇಲ್ಲಿನ ರೈತರ ಸಂಕಷ್ಟಗಳನ್ನು ಕೊನೆಗಾಣಿಸುವ ಉದ್ದೇಶ ಆಮ್ ಆದ್ಮಿ ಹೊಂದಿದೆ ಎಂದರು.