ಭೂಕುಸಿತ: ಹುಬ್ಬಳ್ಳಿ-ಗೋವಾ ರೈಲು ಸಂಚಾರ ಸಂಪೂರ್ಣ ಸ್ಥಗಿತ

0
4

ಕಾರವಾರ: ಉತ್ತರಕನ್ನಡದಲ್ಲಿ ಇಂದು ಕೂಡ ಮಳೆ ಮುಂದುವರಿದಿದ್ದು, ಜೊಯೀಡಾದ ಕ್ಯಾಸಲ್ ರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತವಾಗಿ ರೈಲ್ವೆ ಸಂಚಾರ ಸ್ಥಗೀತಗೊಂಡಿದೆ.
ಕಳೆದ ಕೆಲ ದಿನಗಳಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಭಾರಿ ಮಳೆಗೆ ಕರಂಜೋಲ್ ರೈಲ್ವೆ ಮಾರ್ಗದಲ್ಲಿಯೇ ಭೂಕುಸಿತವಾಗಿದೆ. ಘಟನೆಯಿಂದ ಹುಬ್ಬಳ್ಳಿ-ಗೋವಾ ರೈಲು  ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯ ಭೂಕುಸಿತದ  ಸ್ಥಳದಲ್ಲಿನ ಮಣ್ಣನ್ನು ರೈಲ್ವೆ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ ತೆರವಿನ ಕಾರ್ಯಾಚರಣೆ ಆರಂಭಿಸಿದ್ದಾರೆ.

Previous articleತಾಯಿ ಹಳ್ಳದಲ್ಲಿ ವೃದ್ಧೆಯ ಶವ ಪತ್ತೆ
Next articleಬೆಣ್ಣೆ ಹಳ್ಳ ಪ್ರವಾಹ: ಶಾಶ್ವತ ಪರಿಹಾರದ ಭರವಸೆ