ಬೋಗಸ್‌ ಬಿಪಿಎಲ್‌ ಕಾರ್ಡ್‌ ಸಂಖ್ಯೆ ಹೆಚ್ಚಳ

0
10

ಬೆಂಗಳೂರು: ಬೋಗಸ್‌ ಬಿಪಿಎಲ್‌ ಕಾರ್ಡ್‌ದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಜಿ ಸಚಿವ ಅಶ್ವತ ನಾರಾಯಣ ಆರೋಪಿಸಿದ್ದಾರೆ.
ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು “ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನಲ್ಲಿ ಬೋಗಸ್‌ ಬಿಪಿಎಲ್‌ ಕಾರ್ಡ್‌ದಾರರ ಸಂಖ್ಯೆ ಹೆಚ್ಚಾಗಿದೆ. ಇನ್ನೊಂದೆಡೆ ಆದಾರ್‌ ಸೀಡಿಂಗ್‌ ಮಾಡಲು ವಿಳಂಬ ಧೋರಣೆ ತೋರುತ್ತಿರುವ ಪರಿಣಾಮವಾಗಿ ನ್ಯಾಯಯುತವಾಗಿ ಬಿಪಿಎಲ್‌ ಕಾರ್ಡ್ ಪಡೆಯಬೇಕಾದ ಜನರು ಇದರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದನ್ನೂ ಸ್ಥಗಿತಗೊಳಸಲಾಗಿದೆ. ನ್ಯಾಯಬದ್ಧವಾಗಿರುವ ಜನತೆಯ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಿ, ಅಂಗಡಿಗಳಲ್ಲಿ ಹೆಚ್ಚು ಬೆಲೆ ನೀಡಿ ಆಹಾರ ಪದಾರ್ಥಗಳನ್ನು ಕೊಳ್ಳುವ ಅನಿವಾರ್ಯತೆಗೆ ದೂಡಲಾಗಿದೆ. ನೂರು ದಿನದ ಆಡಳಿತದಲ್ಲಿ ಸಮಸ್ಯೆಯ ಆಗರವನ್ನೇ ಸೃಷ್ಟಿಸಿ, ಜನ ಸಾಮಾನ್ಯರ ಜೀವ ಹಿಂಡುತ್ತಿದೆ ಈ ಸರ್ಕಾರ” ಎಂದು ಅವರು ಬರೆದುಕೊಂಡಿದ್ದಾರೆ.

Previous articleರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ: ಮೂವರು ಸಾವು
Next articleವೈದ್ಯರ ಕಾರಿನ ಮೇಲೆ ಗುಂಡಿನ ದಾಳಿ