ಬೊಮ್ಮಾಯಿ ಸರ್ಕಾರ ಭ್ರಷ್ಟಾಸುರ ಸರ್ಕಾರ: ಸುರ್ಜೆವಾಲಾ

0
13

ಹಾವೇರಿ: ಬೊಮ್ಮಾಯಿ ಸರ್ಕಾರ ಭ್ರಷ್ಟಾಸುರ ಸರ್ಕಾರ. ಬಿಜೆಪಿ ಅಂದರೆ ಭಾರತೀಯ ಜನತಾ ಪಾರ್ಟಿ ಅಲ್ಪ, ಭ್ರಷ್ಟ ಜನತಾ ಪಾರ್ಟಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ಬೊಮ್ಮಾಯಿ ಸರ್ಕಾರ ಅನ್ನೋದಕ್ಕಿಂತ ಭ್ರಷ್ಟಾಸುರ ಸರ್ಕಾರ ಅನ್ನಬೇಕು. ಬೊಮ್ಮಾಯಿ ಸರ್ಕಾರ ಅಪರಾಧಿಗಳ ಜೊತೆಗೆ ಶಾಮೀಲಾಗಿದೆ. ಬಿಜೆಪಿ ಶಾಸಕನ ಮನೆಯಲ್ಲಿ ಸಿಕ್ಕ 8 ಕೋಟಿ ಹಣ ಮೇಲೆ ಹೋಗ್ತಾ ಇತ್ತು. ಹೀಗಾಗಿ ಶಾಸಕರನ್ನು ಅರೆಸ್ಟ್ ಮಾಡಲಿಲ್ಲ ಎಂದು ದೂರಿದರು.
ಬಿಜೆಪಿಯವರು 40% ಸರ್ಕಾರ ಎಂಬ ಆರೋಪಕ್ಕೆ ಸಾಕ್ಷಿ ತಗೊಂಡು ಬನ್ನಿ ಅಂತ ಹೇಳುತ್ತಿದ್ದರು. ಈಗ 8 ಕೋಟಿ ಸಿಕ್ಕು ನಾಲ್ಕು ದಿನ ಕಳೆಸಿದೆ. ಆದರೂ ವಿರುಪಾಕ್ಷಪ್ಪ ಅವರನ್ನು ಬಂಧಿಸಿಲ್ಲ. ವಿರೂಪಾಕ್ಷಪ್ಪ ಅವರನ್ನು ಯಾವಾಗ ಬಂಧಿಸುತ್ತಿರಿ ಎಂದು ಬಿಜೆಪಿ ಸರ್ಕಾರಕ್ಕೆ ಚಾಟಿ ಬಿಸಿದರು.
ಜನರಿಗೆ ನಾವು ಹಲವು ಭರವಸೆಗಳನ್ನು ನೀಡಿದ್ದೇವೆ. ಇಂದು ಆ ಭರವಸೆಗಳಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದೇವೆ. ಜಾತಿ, ಧರ್ಮದ ಬಂಧನ , ಬೇಧ ಭಾವ ಇಲ್ಲದೇ ಮಹಿಳಾ ಯಜಮಾನಿಗೆ 2000 ರೂಪಾಯಿ ಸಹಾಯ ಧನ, 200 ಯುನಿಟ್ ವಿದ್ಯುತ್ ಫ್ರೀ, 10 ಕೆಜಿ ಅಕ್ಕಿ ಕೊಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

Previous articleಪಂಚಮಸಾಲಿ ಮೀಸಲಾತಿ: ಸಮಾಜಕ್ಕೆ ಒಳ್ಳೆಯ ದಿನ ಬರಲಿವೆ: ವಚನಾನಂದ ಸ್ವಾಮೀಜಿ
Next articleವರದಕ್ಷಿಣೆ ಕಿರುಕುಳ: ಶಾಲೆಯಲ್ಲಿ ವಿಷ ಸೇವಿಸಿ ಶಿಕ್ಷಕಿ ಆತ್ಮಹತ್ಯೆ