ಬಿಜೆಪಿ ಸಮಾವೇಶಕ್ಕೆ ತೆರಳಿದ್ದ ಯುವಕ ನೀರುಪಾಲು

0
17
ನೀರು

ಬಳ್ಳಾರಿ: ಜಿಲ್ಲೆಯಲ್ಲಿ ಬಿಜೆಪಿವತಿಯಿಂದ ನಡೆದ ರಾಜ್ಯಮಟ್ಟದ ಎಸ್ಟಿ ಸಮಾವೇಶಕ್ಕೆ ಆಗಮಿಸಿದ್ದ ಯುವಕನೊಬ್ಬ ಕಾಲುವೆಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬಳ್ಳಾರಿಯ ಹೊರವಲಯದಲ್ಲಿ ಆಯೋಜನೆ ಮಾಡಿದ್ದ, ಸಮಾವೇಶ ಮುಗಿದ ಬಳಿಕ ಶೌಚಾಲಯಕ್ಕೆ ತೆರಳಿ ಕಾಲುವೆಗೆ ಮುಖ ತೊಳೆಯಲು ಹೋದ ವೇಳೆ ಗೌತಮ್‌ನಗರದ ಎಚ್‌ಎಲ್‌ಸಿ ಕಾಲುವೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಚೆಳ್ಳಕೇರಿ ತಾಲೂಕಿನ ಗೌರಿಪುರ ನಿವಾಸಿ ಉಮಾಪತಿ(26) ಮೃತ ವ್ಯಕ್ತಿ. ಸಮಾವೇಶದಿಂದ 2 ಕಿಮೀ ದೂರದಲ್ಲಿರುವ ಗೌತಮ್‌ನಗರ ಬಳಿ ಮುಖ ತೊಳೆಯಲು ಹೋದ ವೇಳೆ ಘಟನೆ ಸಂಭವಿಸಿದೆ ಈ ಕುರಿತು ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಆನೆ ದಾಳಿಗೆ: ಶಾಸಕನ ಮೇಲೆ ಹಲ್ಲೆ
Next articleನಾನು ಆರೋಗ್ಯವಾಗಿದ್ದೇನೆ: ಎಚ್ಡಿಕೆ