Home News ಪ್ರಾಣ ಬಿಟ್ಟೇವು, ಪಿಂಚಣಿ ಬಿಡೆವು: ನೂರಾರು ಶಿಕ್ಷಕರಿಂದ ಅರೆ ಬೆತ್ತಲೆ ಮೆರವಣಿಗೆ

ಪ್ರಾಣ ಬಿಟ್ಟೇವು, ಪಿಂಚಣಿ ಬಿಡೆವು: ನೂರಾರು ಶಿಕ್ಷಕರಿಂದ ಅರೆ ಬೆತ್ತಲೆ ಮೆರವಣಿಗೆ

ಬೆಳಗಾವಿ: ಪಿಂಚಣಿಗಾಗಿ ಒತ್ತಾಯಿಸಿ ನೂರಾರು ಶಿಕ್ಷಕರು, ನೌಕರರಿಂದ ಸುವರ್ಣಸೌಧದ ಬಳಿ ಅರೆ ಬೆತ್ತಲೆ ಮೆರವಣಿಗೆ ನಡೆಯಿತು.
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ, ಪಿಂಚಣಿ ವಂಚಿತ ನೌಕರರ ಸಂಘದ ಪ್ರತಿಭಟನೆ 81ನೇ ದಿನಕ್ಕೆ ಕಾಲಿಟ್ಟಿದ್ದರೂ ಸರ್ಕಾರ ಇತ್ತ ಗಮನಹರಿಸುತ್ತಿಲ್ಲ. ಹಳೆ ಪಿಂಚಣಿ ಯೋಜನೆ ಹಾಗೂ ಆರೋಗ್ಯ ಸಂಜೀವಿನಿ‌ ಯೋಜನೆಗಳ‌ ಜಾರಿಗೆ ಒತ್ತಾಯಿಸಿದ್ದೇವೆ. ಈಗಾಗಲೇ ಪಿಂಚಣಿ ಸಿಗದೇ ಸುಮಾರು 3,000 ಸಾವಿರ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಇಂತಹ ಕುಟುಂಬಗಳಿಗೆ ಆರ್ಥಿಕ ಸೌಲಭ್ಯಗಳೇ ಇಲ್ಲ. ಪಿಂಚಣಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಸರ್ಕಾರ ಮಾತ್ರ ಈ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಸಂಘ ಆರೋಪಿಸಿದೆ.

ಪ್ರಾಣ ಬಿಟ್ಟೇವು, ಪಿಂಚಣಿ ಬಿಡೆವು: ನೂರಾರು ಶಿಕ್ಷಕರಿಂದ ಅರೆ ಬೆತ್ತಲೆ ಮೆರವಣಿಗೆ
Exit mobile version