ಪುನೀತ್‌ ೨ನೇ ಪುಣ್ಯಸ್ಮರಣೆ

0
19

ಬೆಂಗಳೂರು: ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ದೈಹಿಕವಾಗಿ ಅಗಲಿ ಇಂದಿಗೆ 2 ವರ್ಷಗಳು ಕಳೆದಿವೆ. ‌ಕಂಠೀರವ ಸ್ಟುಡಿಯೋ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. 2ನೇ ವರ್ಷದ ಪುಣ್ಯ ಹಿನ್ನೆಲೆ ಪುನೀತ್‌ ಪತ್ನಿ ಅಶ್ವಿನಿ, ಮಗಳು, ರಾಘವೇಂದ್ರ ರಾಜ್‌ ಕುಮಾರ್‌ ಸೇರಿದಂತೆ ಕುಟುಂಬಸ್ಥರೆಲ್ಲಾರು ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದರು. ಅಪ್ಪನಿಗೆ ಇಷ್ಟವಾದ ತಿಂಡಿಗಳನ್ನು ಸಮಾಧಿ ಮುಂದೆ ಇಟ್ಟು ಮಕ್ಕಳು ಸಹ ಗೌರವ ನಮನ ಸಲ್ಲಿಸಿದರು.
ಅಪ್ಪು ಸಮಾಧಿಗೆ ಗುಲಾಬಿ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಪಕ್ಕದಲ್ಲಿರುವ ಡಾ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿಗೂ ಹೂವಿನ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯಿಂದಲೇ ಅಪ್ಪು ಸಮಾಧಿ ಬಳಿ ಅಭಿಮಾನಿಗಳು ಬರಲು ಆರಂಭಿಸಿದ್ದಾರೆ. ಕಂಠೀರವ ಸ್ಟುಡಿಯೋ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Previous articleಜನ ನಮ್ಮ ಜತೆ ಇದ್ರೆ ಯಾರೂ ಏನೂ ಮಾಡೋಕಾಗಲ್ಲ
Next articleಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ೮ ಪಟ್ಟು ಹೆಚ್ಚಳ