ದಾವಣಗೆರೆಯಲ್ಲಿ ಆಪ್‌ ರಾಜ್ಯ ಸಮಾವೇಶ

0
13
ದಾವಣಗೆರೆ ಆಪ್‌

ದಾವಣಗೆರೆ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ ಬೆಣ್ಣೆ ನಗರಿ ದಾವಣಗೆರೆಯಿಂದ ಚುನಾವಣಾ ಪ್ರಚಾರಕ್ಕೆ ಆಮ್ ಆದ್ಮಿ ಪಕ್ಷದ ಸ್ಥಾಪಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ಆಮ್ ಆದ್ಮಿಗೆ ನೆಲೆ ಕಲ್ಪಿಸಲು ದಾವಣಗೆರೆ ಆಯ್ಕೆ ಮಾಡಿಕೊಂಡ ಅರವಿಂದ್ ಕೇಜ್ರಿವಾಲ್ ಬೆಣ್ಣೆ ನಗರಿಗೆ ಆಗಮಿಸಿದ್ದಾರೆ.


ದಾವಣಗೆರೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆಯಲ್ಲಿ. ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಅರವಿಂದ್ ಕೇಜ್ರಿವಾಲ್​ಗೆ ಸಾಥ್ ನೀಡಿದಾರೆ. ಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆ ಅದೃಷ್ಟದ ನೆಲ ಎಂದೇ ಪ್ರಸಿದ್ದಿ ಪಡೆದ ದಾವಣಗೆರೆಯಿಂದ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ಅರವಿಂದ್ ಕೇಜ್ರಿವಾಲ್ ಮುಂದಾಗಿದ್ದು. ಸದ್ಯ ಆಮ್ ಆದ್ಮಿ ಬಹಿರಂಗ ಸಮಾವೇಶಕ್ಕೆ ದಾವಣಗೆರೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಭರ್ಜರಿ ಕಾರ್ಯಕ್ರಮ ನಡೆದಿದೆ.

Previous articleಹಾಸನ ಟಿಕೆಟ್‌ ಹಂಚಿಕೆ ರೇವಣ್ಣ ಅಂಗಳಕ್ಕೆ
Next articleಸಿಸಿಬಿ ಪೊಲೀಸರ ದಾಳಿ: 3 ಕೋಟಿ ಅಕ್ರಮ ಹಣ ಪತ್ತೆ