ತ್ವರಿತಗತಿಯಲ್ಲಿ ತನಿಖೆ ನಡೆಸಿ ಚಂದ್ರು ಸಾವಿನ ನಿಜಾಂಶ ಹೊರಬರಲಿ: ವಿಜಯೇಂದ್ರ

0
13
ರಾಘವೇಂದ್ರ

ದಾವಣಗೆರೆ: ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣದ ತನಿಖೆ ತೀವ್ರವಾಗಿ, ತ್ವರಿತಗತಿಯಲ್ಲಿ ನಡೆಸಿ, ಸತ್ಯಾಂಶವನ್ನು ಹೊರ ತರುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಹೊನ್ನಾಳಿಯಲ್ಲಿ ಸೋಮವಾರ ಶಾಸಕ ಎಂ.ಪಿ.ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲೇ ಚಂದ್ರು ಅಗಲಿರುವುದು ಶಾಸಕರು, ಕುಟುಂಬಕ್ಕಷ್ಟೇ ಅಲ್ಲ, ಅವಳಿ ತಾಲೂಕಿನ ಜನತೆಗೂ ತೀವ್ರ ಆಘಾತ ತಂದಿದೆ. ಚಂದ್ರು ಸಾವಿನ ಬಗ್ಗೆ ಸರಿಯಾಗಿ ತನಿಖೆ ಆಗಿ, ಸತ್ಯಾಂಶ ಹೊರ ಬರಬೇಕಿದೆ ಎಂದರು.
ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ. ಆದಷ್ಟು ಬೇಗನೆ ತನಿಖೆ ಪೂರ್ಣಗೊಳಿಸಿ, ಸರ್ಕಾರಕ್ಕೆ ವರದಿ ನೀಡಬೇಕು. ತಮ್ಮ ಕುಟುಂಬದ ನೆಚ್ಚಿನ ಮಗ ಚಂದ್ರು ಸಾವಿನ ನೋವಿನಿಂದ ರೇಣುಕಾಚಾರ್ಯ ನೋವಿನಲ್ಲಿದ್ದಾರೆ. ರೇಣುಕಾಚಾರ್ಯ ಅನಾರೋಗ್ಯ ಕಾಡುತ್ತಿದ್ದರೂ ಮನೆಯಲ್ಲಿ ಕುಳಿತ ವ್ಯಕ್ತಿಯಲ್ಲ. ಈಗ ಮಗ ಚಂದ್ರು ಸಾವಿನ ನೋವಿನಿಂದಾಗಿ ಜರ್ಜರಿತರಾಗಿದ್ದಾರೆ ಅವರು ಧೈರ್ಯ ತೆಗೆದುಕೊಳ್ಳಬೇಕು ಎಂದರು.

Previous articleಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ವ್ಯವಸ್ಥಾಪಕ
Next articleಹಿಂದೂ ಎಂಬ ಪದದ ಅರ್ಥ ಅಸಭ್ಯ: ಕಾಂಗ್ರೆಸ್‌ ನಾಯಕ ಸತೀಶ ಜಾರಕಿಹೊಳಿ