Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ತೆಲಂಗಾಣ ಶಾಸಕರಿದ್ದ ಜೀಪು ಅಪಘಾತ: ಶಾಸಕರು ಪಾರು

ತೆಲಂಗಾಣ ಶಾಸಕರಿದ್ದ ಜೀಪು ಅಪಘಾತ: ಶಾಸಕರು ಪಾರು

0

ಮಂಗಳೂರು: ಮಂಗಳೂರಿನಿಂದ ಶೃಂಗೇರಿ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದ ತೆಲಂಗಾಣದ ಶಾಸಕರು ಪ್ರಯಾಣಿಸುತ್ತಿದ್ದ ಜೀಪ್ ಅಪಘಾತಕ್ಕೊಳಗಾದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ಸಮೀಪ ಮಿಯ್ಯಾರು ಸೇತುವೆ ಬಳಿಯ ಮುಡಾರು-ನಲ್ಲೂರು ಕ್ರಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ತೆಲಂಗಾಣದ ಟೆಂಡೂರ್ ಕ್ಷೇತ್ರದ ಶಾಸಕ ಪಂಚುಗುಲ ರೋಹಿತ್ ರೆಡ್ಡಿ ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ. ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ವಾಹನದಲ್ಲಿದ್ದ ಶಾಸಕರಿಗೆ ಯಾವುದೇ ತರದಲ್ಲಿ ಗಾಯಗಳು ಸಂಭವಿಸಲಿಲ್ಲ.
ಶಾಸಕ ರೋಹಿತ್ ರೆಡ್ಡಿ ಹೈದರಾಬಾದ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದರು. ಬಳಿಕ ಅವರು ಕಾರ್ಕಳ ಮಾರ್ಗವಾಗಿ ಶೃಂಗೇರಿ ಭೇಟಿಗೆ ಹೊರಟಿದ್ದರು. ಈ ವೇಳೆ ಇಲ್ಲಿನ ಮುಡಾರು-ನಲ್ಲೂರು ಕ್ರಾಸ್ ಬಳಿ ಕಾರಿನ ಟಯರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದೆ.
ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ನಡುಗೆ ಸಿಲುಕಿದ ಜೀಪು ಜಖಂಗೊಂಡಿದೆ. ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಪ್ರತ್ಯೇಕ ವಾಹನದಲ್ಲಿ ಶಾಸಕರು ಶೃಂಗೇರಿ ಕಡೆಗೆ ಪ್ರಯಾಣಿಸಿದ್ದಾರೆ.

Exit mobile version