ಜೆಸಿಬಿ ನುಗ್ಗಿಸಿ ಎಟಿಎಂ ದರೋಡೆಗೆ ಯತ್ನ

0
7

ಮಂಗಳೂರು: ಎಟಿಎಂಗೆ ಜೆಸಿಬಿ ನುಗ್ಗಿಸಿ ಹಣ ದೋಚುವ ವಿಫಲ ಯತ್ನವೊಂದು ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ಮುಂಭಾಗ ನಡೆದಿದೆ. ವಿದ್ಯಾದಾಯಿನಿ ಶಾಲೆಯ ಮುಂಭಾಗ ಇರುವ ಜಯಶ್ರೀ ವಾಣಿಜ್ಯ ಸಂಕೀರ್ಣದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್‌ನ ಶಾಖಾ ಎಟಿಎಂ ಮೆಶಿನ್‌ಗೆ ಕಳ್ಳರು ಕಳೆದ ರಾತ್ರಿ ಕನ್ನ ಹಾಕಿದ್ದಾರೆ. ಈ ವೇಳೆ ಎಟಿಎಂನ ಗಾಜು ಪುಡಿಯಾಗುತ್ತಿದ್ದಂತೆಯೇ ಎಮರ್ಜೆನ್ಸಿ ಸೈರನ್ ಮೊಳಗಿದೆ. ಕಳ್ಳರು ಜೆಸಿಬಿ ಸಹಿತ ಸ್ಥಳದಿಂದ ಪರಾರಿಯಾಗಿದ್ದಾರೆ. ಕಳ್ಳರ ಈ ಕೃತ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಡಿಸಿಪಿ ದಿನೇಶ್ ಕುಮಾರ್, ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಗ್ಯಾರೆಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್‌ಪಿ ಹಣ ವಾಪಸ್ ಪಡೆಯದಿದ್ದರೆ, ರಾಜ್ಯಾದ್ಯಂತ ಹೋರಾಟ
Next articleಸೌಜನ್ಯ ಪ್ರಕರಣ: ಡಾ. ಹೆಗ್ಗಡೆ ವಿರುದ್ಧ ಅಪಪ್ರಚಾರ ಖಂಡಿಸಿ, ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ