Home ತಾಜಾ ಸುದ್ದಿ `ಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ’ ಸ್ಪರ್ಧೆ ವಿಜೇತರಿಗೆ 9ರಂದು ಬಹುಮಾನ ವಿತರಣೆ

`ಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ’ ಸ್ಪರ್ಧೆ ವಿಜೇತರಿಗೆ 9ರಂದು ಬಹುಮಾನ ವಿತರಣೆ

0

ಹುಬ್ಬಳ್ಳಿ: ಪ್ರತಿಷ್ಠಿತ ಸಂಯುಕ್ತ ಕರ್ನಾಟಕ' ದಿನ ಪತ್ರಿಕೆ ತನ್ನ ಓದುಗರಿಗಾಗಿ ಗಣೇಶೋತ್ಸವ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ’ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಅಕ್ಟೋಬರ್ 9ರಂದು ಸೋಮವಾರ ಸಂಜೆ ೪.೩೦ಕ್ಕೆ ಕೊಪ್ಪೀಕರ ರಸ್ತೆಯ ಸಂಯುಕ್ತ ಕರ್ನಾಟಕ' ಕಚೇರಿ ಆವರಣದ ಕಬ್ಬೂರ ಸಭಾಗೃಹದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದತ್ತಾ ಇನ್ಫ್ರಾಸ್ಟ್ರಕ್ಚರ್ ಮಾಲೀಕರಾದ ಪ್ರಕಾಶ ಜೋಶಿ ಹಾಗೂ ಹುಬ್ಬಳ್ಳಿ-ಧಾರವಾಡ ಬಂಟರ್ ಸಂಘದ ಅಧ್ಯಕ್ಷರಾದ ಸುಗ್ಗಿ ಸುಧಾಕರ್ ಶೆಟ್ಟಿ, ಸ್ವರ್ಣ ಸಮೂಹ ಸಂಸ್ಥೆಗಳ ಪಾಲುದಾರರಾದ ಗುಜ್ಜಾಡಿ ಗೋಪಾಲ ನಾಯಕ ಅವರು ಆಗಮಿಸುವರು.

Exit mobile version