Home ಕ್ರೀಡೆ ಕೋಹ್ಲಿ ಗಂಭೀರ ವಾಕ್ಸಮರ್ : ಅವಳಿನಗರದ 112 ಕ್ಕೆ ಪೋನ್ ಮಾಡಬೇಕಲ್ಲ

ಕೋಹ್ಲಿ ಗಂಭೀರ ವಾಕ್ಸಮರ್ : ಅವಳಿನಗರದ 112 ಕ್ಕೆ ಪೋನ್ ಮಾಡಬೇಕಲ್ಲ

0

ಹುಬ್ಬಳ್ಳಿ: ಲಕ್ನೋ ಮತ್ತು ಆರ್ ಸಿಬಿ ನಡುವೆ ನಡೆದ ರೋಚಕ್ ಪಂದ್ಯದಲ್ಲಿ ಆರ್ ಸಿಬಿ ಗೆದ್ದು ಬೀಗಿದೆ. ಈ ನಡುವೆ ಪಂದ್ಯ ಮುಗಿದ ಬಳಿಕ ಕೋಹ್ಲಿ ಮತ್ತು ಮಾಜಿ ಆಟಗಾರ ಗಂಭೀರ ನಡುವೆ ನಡೆದ ವಾಕ್ಸಮರ್ ಕ್ರೀಡಾಭಿಮಾನಿಗಳಿಗೆ ಬಿಸಿ ಏರಿಸಿತ್ತು.
ಈಗ ಅದೇ ವಿಷಯ ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಯಲ್ಲೂ ಕಿಚ್ಚು ಹಚ್ಚಿದ್ದು, ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಹೌದು..ಪಂದ್ಯ ಗಂಭೀರ ಚರ್ಚೆಯ ಸನ್ನಿವೇಶವನ್ನ ಹುಬ್ಬಳ್ಳಿ‌ ಧಾರವಾಡ ಪೊಲೀಸ್ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಂತಾ ಟೈಮ್ ನ್ಯಾಗ ನೀವ ನಮ್ಮ 112 ಕ್ಕೆ ಕಾಲ್ ಮಾಡಬೇಕಿತ್ರೀ ಎಂಬುದ ಸಂದೇಶದೊಂದಿಗೆ ಪೋಟೊ ಶೇರ್ ಮಾಡಿರುವುದು ವೈರಲ್ ಆಗಿದೆ.
ಯಾವುದೇ ಗಂಭೀರ ಸಮಸ್ಯೆಗಳು ಉಂಟಾದಾಗ 112 ಕ್ಕೆ ಕರೆ ಮಾಡಿ, ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಸದಾ ಸಿದ್ಧವಾಗಿರುತ್ತದೆ. ಗೊತ್ತಲ್ಲಾ‌ ನಮ್ಮ ರೀಚ್ ಟೈಮ್ ಎಂದು ಜಾಗೃತಿ ಮೂಡಿಸಿದೆ.
ಒಟ್ನಲ್ಲಿ ಪಂದ್ಯವಷ್ಟೆ ಅಲ್ಲದೆ ಕೋಹ್ಲಿ‌ ಗಂಭೀರ ಅವರ ಮಾತಿನ ಸಮರ ಎಲ್ಲೇಡೆ ಚರ್ಚೆಯಲ್ಲಿರುವಾಗಲೇ ಹುಬ್ಬಳ್ಳಿ ಧಾರವಾಡ 112 ರ ಸಹಾಯವಾಣಿ ಕೂಡ ಚರ್ಚೆಯಾಗಿ ವೈರಲ್ ಆಗಿದೆ.

Exit mobile version