ಬಾಗಲಕೋಟೆ: ತೇರದಾಳ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಹಾರೂನ್ ಸಾಂಗ್ಲಿಕರ ಮೇಲೆ ವಂಚನೆ ಮಾಡಿರುವ ಆರೋಪದ ಹಿನ್ನಲೆ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಬಕವಿಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಬನಹಟ್ಟಿಯ ಅಂಜುಮಾನ್ ಎ-ಇಸ್ಲಾಂ ಕಮಿಟಿಯ ಖಾತೆ ಹೊಂದಿದ್ದು, ಅಧ್ಯಕ್ಷ ಸ್ಥಾನ ಮುಕ್ತಾಯಗೊಂಡ ನಂತರವೂ ಬ್ಯಾಂಕಿನಿಂದ ಅ. 24 ಹಾಗೂ 28ರಂದು ತಲಾ 10 ಸಾವಿರ ಹಾಗೂ 25 ಸಾವಿರ ರೂ.ಗಳನ್ನು ಬಟವಡೆ ಮಾಡಿಕೊಂಡಿದ್ದರ ಹಿನ್ನಲೆ ಫರ‍್ಯಾಧಿದಾರರ ಹಾಗು ಹಾಲಿ ಕಮಿಟಿ ಅಧ್ಯಕ್ಷ ಬುಡಾನಸಾಬ(ಹಿರಾಹ್ಮನ್) ಜಮಾದಾರ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಬ್ಯಾಂಕ್ ಖಾತೆ ಮೂಲಕ ನಗದು ಪಡೆದು ಕಮಿಟಿಯ ಸದಸ್ಯರಿಗೆ ಮಾಹಿತಿ ನೀಡದೆ ಹಾಗು ವಂಚನೆ ಮಾಡಿದ್ದರ ಬಗ್ಗೆ ಯಾವದೇ ಉತ್ತರ ನೀಡದ ಕಾರಣ ಪ್ರಕರಣ ದಾಖಲು ಅನಿವಾರ್ಯವಾಯಿತೆಂದು ಜಮಾದಾರ ಸ್ಪಷ್ಟಪಡಿಸಿದರು.
ಈ ಕುರಿತು ಪಿಎಸ್‌ಐ ಪಾಂಡುರಂಗ ಪೂಜಾರಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.