Home ನಮ್ಮ ಜಿಲ್ಲೆ ದಾವಣಗೆರೆ ಕಾಂಗ್ರೆಸ್ಸಿಗರು 70ವರ್ಷ ಏನು ಕಡುಬು ತಿನ್ನುತ್ತಾ ಇದ್ರಾ?

ಕಾಂಗ್ರೆಸ್ಸಿಗರು 70ವರ್ಷ ಏನು ಕಡುಬು ತಿನ್ನುತ್ತಾ ಇದ್ರಾ?

0
BSY

ದಾವಣಗೆರೆ: ಕಾಂಗ್ರೆಸ್ಸಿಗರು 70 ವರ್ಷಗಳ ಕಾಲ ಏನು ಕಡುಬು ತಿನ್ನುತ್ತಾ ಇದ್ರಾ? ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷ ಅನೇಕ ಗ್ಯಾರಂಟಿ ಕಾರ್ಡ್​ ಕೊಡಲು ಹೊರಟಿದೆ. 70 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಆದ್ರೆ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನ ಇಲ್ಲ ಎಂದರು. ವಿಜಯ ಸಂಕಲ್ಪ ಯಾತ್ರೆ ರಾಜ್ಯದೆಲ್ಲೆಡೆ ಸಂಚರಿಸಿದ್ದು, ಎಲ್ಲೆಡೆ ಬಿಜೆಪಿ ಪರ ಅಲೆ ಕಂಡು ಬಂದಿದೆ. ಮಹಾಸಂಗಮಕ್ಕೆ ಸೇರಿರುವ ಜನಸ್ತೋಮವೇ ಇದಕ್ಕೆ ಸಾಕ್ಷಿ ಎಂದರು.

Exit mobile version