ಕಲಬುರಗಿ: ಅಮೃತ ಭಾರತ ಯೋಜನೆ ಅಡಿ ಕಲಬುರಗಿ ಜಿಲ್ಲೆಯ ಕಲಬುರಗಿ ಜಂಕ್ಷನ್, ಶಹಾಬಾದ, ವಾಡಿ ಜಂಕ್ಷನ್ ಮತ್ತು ಗಾಣಗಾಪುರ ರೈಲ್ವೆ ನಿಲ್ದಾಣಗಳ ಪುನರ್ ವಿಕಾಸ ಅಡಿಗಲ್ಲು ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಭೂಮಿ ಪೂಜೆ ನೆರವೇರಿಸಿದರು.
ನಂತರ ಸ್ಥಳೀಯ ಸಂಸದ ಡಾ. ಉಮೇಶ್ ಜಾಧವ ಅವರು ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದು, ಅಡಿಗಲ್ಲು ಶಿಲಾನ್ಯಾಸ ನೆರವೇರಿಸಿದರು. 30 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ನವೀಕರಣ, ಫ್ಲಾಟ್ ಫಾರ್ಮ್ ೪ ಸೇರಿ ಅನೇಕ ಸವಲತ್ತುಗಳು ಅಭಿವೃದ್ಧಿ ಮಾಡಲು ಒಂದು ವರ್ಷದ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಇನ್ನೂ ಕಲಬುರಗಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಪ್ರತ್ಯೇಕ ರೈಲ್ವೆ ಓಡಿಸಲಾಗುವುದು. ಅದೇ ರೀತಿ ಕಲಬುರಗಿ ರೈಲ್ವೆ ನಿಲ್ದಾಣದಿಂದ ಮುಂಬೈಗೆ ಮತ್ತೊಂದು ರೈಲ್ವೆ ಓಡಿಸಲಾಗುವುದು ಎಂದರು.