ಕರ್ನಾಟಕದ ನೇರಳೆ ಲಂಡನ್‌ಗೆ

0
17

ಬೆಂಗಳೂರು: ಕರ್ನಾಟಕದಲ್ಲಿ ಬೆಳೆಯುವ ನೇರಳೆ ಹಣ್ಣು ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೇ ಮೊದಲ ಬಾರಿಗೆ ನೇರಳೆ ಹಣ್ಣನ್ನು ಕರ್ನಾಟಕದಿಂದ ಲಂಡನ್‌ಗೆ ರಫ್ತು ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕರ್ನಾಟಕದಲ್ಲಿ ಬೆಳೆಯುವ ನೇರಳೆ ಹಣ್ಣು ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೇ ಮೊದಲ ಬಾರಿಗೆ ನೇರಳೆ ಹಣ್ಣನ್ನು ಕರ್ನಾಟಕದಿಂದ ಲಂಡನ್‌ಗೆ ರಫ್ತು ಮಾಡಲಾಗುತ್ತಿದೆ. ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ. ನಮ್ಮ ಮನೆ ಮುಂದೆ, ಹಳ್ಳಿಗಳ ಗುಡ್ಡಗಳಲ್ಲಿ ಸಿಗುವ ನೇರಳೆ ಹಣ್ಣುಗಳು ಇದೀಗ ಲಂಡನ್ ಫೈಟ್ ಹತ್ತಿವೆ. ಹೌದು, ಬೇಸಿಗೆ ಕಾಲದಲ್ಲಿ ಫಲ ಬಿಡುವ ನೇರಳೆ ಹಣ್ಣು ತಿನ್ನಲು ಬಲು ರುಚಿ ಜೊತೆಗೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಕೂಡ ಇವೆ. ಈ ಕಾರಣದಿಂದ ಹಣ್ಣು ಬೇರೆ ದೇಶಗಳಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಇದಕ್ಕೆ ಬೆಲೆ ಸ್ವಲ್ಪ ಹೆಚ್ಚು. ಹಳ್ಳಿ ಭಾಗಗಳಲ್ಲಿ ಗುಡ್ಡಗಳಲ್ಲಿ ನೇರಳೆ ಹಣ್ಣಿನ ಮರಗಳಿರುವುದು ಸಾಮಾನ್ಯ. ಇಂತಹ ನೇರಳೆ ಹಣ್ಣಿಗೆ ಈಗ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ನೇರಳೆ ಹಣ್ಣನ್ನು ಲಂಡನ್ ಗೆ ಕರ್ನಾಟಕದಿಂದ ರಫ್ತು ಮಾಡಲಾಗುತ್ತದೆ. ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆಯಾಗಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದಿಂದ ಲಂಡನ್‌ಗೆ ತಾಜಾ ನೇರಳೆ ಹಣ್ಣುಗಳ ರಪ್ತಿಗೆ ಚಾಲನೆ ನೀಡಿದೆ. ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

Previous article2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ
Next articleನೇರಸೆ ಅರಣ್ಯದಲ್ಲಿ ಕಡವೆ ಬೇಟೆ: 9 ಮಂದಿ ಬಂಧನ