ಇಂಡಿಯಾ ಒಕ್ಕೂಟದಿಂದ ಮೋದಿಗೆ ಹೆದರಿಕೆ

0
4

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳನ್ನೊಳಗೊಂಡ ಇಂಡಿಯಾ ಮಹಾಒಕ್ಕೂಟದ ಬಗ್ಗೆ ಹೆದರಿಕೆ ಆರಂಭವಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರು ಕೇಳಿದ ಇಂಡಿಯಾ ಬದಲಿಗೆ ಭಾರತ ಎಂದು ಮರುನಾಮಕರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ರೀತಿಯಲ್ಲಿಯೇ ದೇಶದಲ್ಲೂ ತಿರಸ್ಕಾರ ಮಾಡುತ್ತಾರೆ ಎಂಬುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಬಂದಿರುವ ಪರಿಸ್ಥಿತಿ, ದೇಶದಲ್ಲೂ ಬರುತ್ತದೆ. ಇದಕ್ಕಾಗಿ ನಿರ್ಧಾರ ಮಾಡಿದ್ದು, ಬರುತ್ತದೆ. ಹಾಗಾಗಿ ಒಂದುದೇಶ, ಒಂದು ಚುನಾವಣೆ ಎನ್ನುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

Previous articleಬಾವಿಯಲ್ಲಿ ಬಿದ್ದ ಗೂಳಿಯ ರಕ್ಷಣೆ
Next articleಖಣಗಳನ್ನು ವೀಕ್ಷಿಸಿದ ಮೈಸೂರು ರಾಜರ ಮೊಮ್ಮಗ