ಅನಧಿಕೃತ ಬ್ಯಾನರ್‌: ಸಚಿವ ಪ್ರಿಯಾಂಕ್‌ ಖರ್ಗೆಗೆ 5000 ದಂಡ

0
8

ಕಲಬುರಗಿ: ಅನುಮತಿ ಪಡೆಯದೇ ಬ್ಯಾನರ್ ಹಾಕಿದ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪಾಲಿಕೆಯಿಂದ 5,000 ರೂ. ದಂಡ ವಿಧಿಸಿದ ಘಟನೆ ನಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಲಬುರಗಿ ಸಿಟಿ ಕಾರ್ಪೊರೇಷನ ರಸಿದಿಯನ್ನು ಹಂಚಿಕೊಂಡಿದ್ದು ಪ್ರಿಯಾಂಕ್ ಖರ್ಗೆರವರು, ಮಾನ್ಯ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದು ಕಂಡ ಬಂದ ಕಾರಣ, ಪಾಲಿಕೆಯಿಂದ ಮಾನ್ಯ ಸಚಿವರಿಗೆ ರೂ. 5,000/- ಗಳ ದಂಡ ವಿಧಿಸಲಾಯಿತು. ಸದರಿ ವಿಷಯವನ್ನು ಮನಗಂಡು, ಪಾಲಿಕೆಯ ಕ್ರಮವನ್ನು ಬೆಂಬಲಿಸಿ ದಂಡದ ಮೊತ್ತವನ್ನು ಪಾವತಿಸಲು ಒಪ್ಪಿದರು ಎಂದಿದ್ದಾರೆ.

Previous articleಕಾವೇರಿ ಅನ್ಯಾಯ ವಿರೋಧಿಸಿ ಮಂಡ್ಯದಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ
Next articleಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವುತ್ತ ಬಂದಿದೆ