ಹುಬ್ಬಳ್ಳಿ: ಹಳೇಯ ಬಂಗಾರದ ಆಭರಣಗಳನ್ನು ತೊಳೆದುಕೊಡುವುದಾಗಿ ನಂಬಿಸಿ ಇಬ್ಬರು ಅಪರಿಚಿತರು ನಗರದ ಮಹಿಳೆಗೆ 1.45 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೋಳದ ಓಣಿಯ ಶ್ವೇತಾ ಖೋಡೆ ಎಂಬುವರಿಗೆ ವಂಚಿಸಲಾಗಿದೆ. ಮಧ್ಯಾಹ್ನದ ವೇಳೆ ಮನೆ ಹತ್ತಿರ ಬಂದ ಇಬ್ಬರು ಅಪರಿಚಿತರು ಹಳೇಯ ಬಂಗಾರ ತೊಳೆದುಕೊಡುವ ನೆಪದಲ್ಲಿ ನಾಲ್ಕು ತೊಲೆ ಮಂಗಳಸೂತ್ರ, ಒಂದು ತೊಲೆ ಚೈನ್ ಕಳ್ಳತನ ಮಾಡಿದ್ದಾರೆ.
ಮೊದಲು ತಾಮ್ರದ ಚೆಂಬು, ಕಾಲು ಚೈನ್ ತೊಳೆದುಕೊಟ್ಟು ನಂಬಿಕೆ ಬರುವಂತೆ ಮಾಡಿದ್ದಾರೆ. ಆ ನಂತರ ನಾಲ್ಕುವರೆ ತೊಲೆಯ ಆಭರಣ ಇಸಿದುಕೊಂಡು ಕುಕ್ಕರ್‌ನಲ್ಲಿ ಹಾಕಿ ಕುದಿಸಲು ಹೇಳಿ ಹೋಗಿದ್ದಾರೆ. ಮರಳಿ ಬಂದು ನೋಡುವುದಾಗಿ ಹೇಳಿ ಬಂಗಾರ ಕಪ್ಪಾಗಿದ್ದರಿಂದ ಅದಕ್ಕೆ ಅರಿಶಿಣ ಪುಡಿ ಮತ್ತು ಬಿಳಿ ಪೌಡರ್ ಹಾಕಿ ಕೊಟ್ಟು ಕುದಿಸಿ ಎಂದು ಹೇಳಿ ಹೋದವರು ಆಭರಣ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.