Home ಅಪರಾಧ ನದಿಗೆ ಹಾರಿ ತಾಯಿ,‌ ಮಕ್ಕಳು ಆತ್ಮಹತ್ಯೆ

ನದಿಗೆ ಹಾರಿ ತಾಯಿ,‌ ಮಕ್ಕಳು ಆತ್ಮಹತ್ಯೆ

0

ಬಾಗಲಕೋಟೆ: ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಮಲಪ್ರಭಾ ನದಿಗೆ ಹಾರಿ ಜೀವಬಿಟ್ಟಿರುವ ಘಟನೆ ಕಮತಗಿ ಬಳಿ ನಡೆದಿದೆ.

ಸೂಳೇಭಾವಿ ಗ್ರಾಮದ ಉಮಾ ಮಾಸರೆಡ್ಡಿ (೪೨) ಮಕ್ಕಳಾದ ಸೌಂದರ್ಯ(೧೯), ಐಶ್ವರ್ಯ (೨೩) ಮೃತ ದುರ್ದೈವಿಗಳು. ಕುಟುಂಬ ಕಲಹದಿಂದ ಉಮಾ ನೊಂದಿದ್ದರು ಎಂದು ಹೇಳಲಾಗಿದೆ. ಪುತ್ರಿ ಐಶ್ವರ್ಯ ಇಂಜನಿಯರಿಂಗ್ ಪದವಿ ಪಡೆದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇದ್ದಳು, ಇನ್ನೋರ್ವ ಪುತ್ರಿ ಸೌಂದರ್ಯ ಬಾಗಲಕೋಟೆಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶವಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Exit mobile version