ಧಾರವಾಡ Archives - Samyukta Karnataka
ಕಬ್ಬು ರೈತರ ಪ್ರತಿಭಟನೆ ಎಫೆಕ್ಟ್‌: ಹುಬ್ಬಳ್ಳಿ-ಧಾರವಾಡದಲ್ಲಿ ಟ್ರಾಫಿಕ್‌ ರೂಟ್‌ ಚೇಂಜ್‌; ಇಲ್ಲಿದೆ ನೋಡಿ ಪರ್ಯಾಯ ಮಾರ್ಗ
ಹುಬ್ಬಳ್ಳಿ: ಕಬ್ಬಿಗೆ ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಯರಿಕೊಪ್ಪ ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ.
ಪ್ರತಿಭಟನೆ ಮುಗಿಯುವವರೆಗೆ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ. ನರೇಂದ್ರ ಬೈಪಾಸ್ ಕಡೆಯಿಂದ ಹುಬ್ಬಳ್ಳಿಗೆ ಬರುವ ವಾಹನಗಳು ಅಗ್ರಿಕಲ್ಚರ್ ಯೂನಿವರ್ಸಿಟಿ, ಹೊಸ ಬಸ್ ನಿಲ್ದಾಣ, ಹಳೇ ಎಸ್.ಪಿ ಕಚೇರಿ ಸರ್ಕಲ್, ಜುಬ್ಬಿ ಸರ್ಕಲ್ ಮಾರ್ಗವಾಗಿ ಸಂಚರಿಸಬೇಕು.
ಬೆಳಗಾವಿ ಕಡೆಯಿಂದ ಸವದತ್ತಿ, ನವಲಗುಂದ, ಬಿಜಾಪುರಕ್ಕೆ ಹೋಗುವ ವಾಹನಗಳು ಹಳೇ ಎಸ್.ಪಿ ಕಚೇರಿ ಸರ್ಕಲ್, ಮರಾಠಾ ಕಾಲನಿ ಮಾರ್ಗವಾಗಿ ಹೋಗಬೇಕು. ಧಾರವಾಡದಿಂದ ಕಾರವಾರ ಮತ್ತು ಬೆಂಗಳೂರಿಗೆ ತೆರಳುವ ಲಘು ವಾಹನಗಳು ಹುಸೂರು, ವಾಣಿ ವಿಲಾಸ, ಎಂ.ಟಿ ಮಿಲ್, ಇಂದಿ ಪಂಪ್ ಸರ್ಕಲ್ ಮೂಲಕ, ಭಾರಿ ವಾಹನಗಳು ಗೋಕುಲ ರಸ್ತೆ, ತಾರಿಹಾಳ ಅಂಡರ್ ಬ್ರಿಡ್ಜ್ ಮೂಲಕ ಸಂಚರಿಸಬೇಕು.
ಗಬ್ಬೂರು ಸರ್ಕಲ್ ಬಂದ್ ಮಾಡಿದಲ್ಲಿ ಬೆಂಗಳೂರು-ಹುಬ್ಬಳ್ಳಿ ವಾಹನಗಳು ರಿಂಗ್ ರಸ್ತೆ, ಅಂಚಟಗೇರಿ ಮತ್ತು ಕಾರವಾರ ರಸ್ತೆ ಅಂಡರ್ ಬ್ರಿಡ್ಜ್ ಮಾರ್ಗ ಬಳಸಬೇಕು. ಕಲಘಟಗಿ ರಸ್ತೆಯಲ್ಲಿ ರಮ್ಯಾ ರೆಸಿಡೆನ್ಸಿ ಹೋಟೆಲ್ ಕಡೆ ಸಂಚಾರ ನಿಷೇಧಿಸಲಾಗಿದ್ದು, ಆ ಮಾರ್ಗದ ವಾಹನಗಳು ಉದಯಗಿರಿ ಡಬಲ್ ರಸ್ತೆ, ಟ್ರಿಪಲ್ ಐಟಿ, ಇಟಿಗಟ್ಟಿ ಮಾರ್ಗವಾಗಿ ಹೋಗಬೇಕು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಕಬ್ಬು ಬೆಳೆಗಾರರ ಆಕ್ರೋಶ: ಹಿರೇಬಾಗೇವಾಡಿ ಟೋಲ್‌ನಲ್ಲಿ ರೈತರ ದಿಢೀರ್ ಪ್ರತಿಭಟನೆ
The post ಕಬ್ಬು ರೈತರ ಪ್ರತಿಭಟನೆ ಎಫೆಕ್ಟ್‌: ಹುಬ್ಬಳ್ಳಿ-ಧಾರವಾಡದಲ್ಲಿ ಟ್ರಾಫಿಕ್‌ ರೂಟ್‌ ಚೇಂಜ್‌; ಇಲ್ಲಿದೆ ನೋಡಿ ಪರ್ಯಾಯ ಮಾರ್ಗ appeared first on Samyukta Karnataka.
ಪ್ರಯಾಣಿಕರಿಗೆ ಗುಡ್‌ನ್ಯೂಸ್: ಹುಬ್ಬಳ್ಳಿ–ಚೆನ್ನೈ ನೇರ ವಿಮಾನ ಸೇವೆ ಪುನರಾರಂಭ
ಹುಬ್ಬಳ್ಳಿ: ಉತ್ತರ ಕರ್ನಾಟಕದ ವಿಮಾನ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಹುಬ್ಬಳ್ಳಿ–ಚೆನ್ನೈ ನೇರ ವಿಮಾನ ಸೇವೆ ಅಕ್ಟೋಬರ್ 27, 2026ರಿಂದ ಮತ್ತೆ ಆರಂಭವಾಗಲಿದೆ.
IndiGo ಸಂಸ್ಥೆ ಈ ಮಾರ್ಗದಲ್ಲಿ ವಾರಕ್ಕೆ ಮೂರು ದಿನ ನೇರ ವಿಮಾನ ಸಂಚಾರ ನಡೆಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. IndiGo ತನ್ನ ಅಧಿಕೃತ ಮಾಹಿತಿಯಲ್ಲೂ ಹುಬ್ಬಳ್ಳಿ–ಚೆನ್ನೈ ನಡುವೆ ನಾನ್‌ಸ್ಟಾಪ್ ಸೇವೆ ಇರುವುದನ್ನು ದೃಢಪಡಿಸಿದೆ.
ಹೊಸ ವೇಳಾಪಟ್ಟಿಯ ಪ್ರಕಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಹುಬ್ಬಳ್ಳಿಯಿಂದ ಚೆನ್ನೈಗೆ ವಿಮಾನ ಸಂಚರಿಸಲಿದೆ. 6E7368 ಸಂಖ್ಯೆಯ ವಿಮಾನವು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಂಜೆ 4.25ಕ್ಕೆ ಹೊರಟು, ಸುಮಾರು 6.05ಕ್ಕೆ ಚೆನ್ನೈ ತಲುಪಲಿದೆ.
ಅದೇ ರೀತಿ, ಚೆನ್ನೈನಿಂದ ಹುಬ್ಬಳ್ಳಿಗೆ ಮರಳುವ 6E7369 ವಿಮಾನವು ಸಂಜೆ 6.35ಕ್ಕೆ ಹೊರಟು ರಾತ್ರಿ 8.20ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪಲಿದೆ. ಹೀಗಾಗಿ ಎರಡೂ ನಗರಗಳ ನಡುವೆ ನೇರ ವಿಮಾನ ಸಂಪರ್ಕವನ್ನು ಬಳಸಿಕೊಳ್ಳುವ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಸಾಕಷ್ಟು ಉಳಿತಾಯವಾಗಲಿದೆ.
ಹುಬ್ಬಳ್ಳಿ–ಚೆನ್ನೈ ಮಾರ್ಗವು ಉತ್ತರ ಕರ್ನಾಟಕದ ಉದ್ಯಮಿಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು, ವೈದ್ಯಕೀಯ ಸೇವೆ ಪಡೆಯುವವರು ಹಾಗೂ ಪ್ರವಾಸಿಗರಿಗೆ ಪ್ರಮುಖ ಸಂಪರ್ಕವಾಗಿದೆ. ನೇರ ವಿಮಾನ ಸೇವೆ ಇಲ್ಲದ ಸಂದರ್ಭಗಳಲ್ಲಿ ಪ್ರಯಾಣಿಕರು ಬೆಂಗಳೂರು ಅಥವಾ ಇತರ ನಗರಗಳ ಮೂಲಕ ಸಂಪರ್ಕ ವಿಮಾನಗಳನ್ನು ಅವಲಂಬಿಸಬೇಕಾಗುತ್ತಿತ್ತು.
ಇದೀಗ ನೇರ ಸೇವೆ ಪುನರಾರಂಭವಾಗುವುದರಿಂದ ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ IndiGo ವಿಮಾನ ಸಂಪರ್ಕ ಒದಗಿಸುತ್ತಿದ್ದು, ಹುಬ್ಬಳ್ಳಿ–ಚೆನ್ನೈ ಮಾರ್ಗದಲ್ಲೂ ನೇರ ಸೇವೆ ಲಭ್ಯವಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
✈️ ಹುಬ್ಬಳ್ಳಿ → ಚೆನ್ನೈ:
4:25 PM – 6:05 PM
✈️ ಚೆನ್ನೈ → ಹುಬ್ಬಳ್ಳಿ:
6:35 PM – 8:20 PM
📅 ಸೇವೆ:
ಮಂಗಳವಾರ, ಗುರುವಾರ, ಶನಿವಾರ
📅 ಪುನರಾರಂಭ:
ಅಕ್ಟೋಬರ್ 27, 2026
✈️ ವಿಮಾನ:
IndiGo 6E7368 / 6E7369
ಈ ಸೇವೆ ಪುನರಾರಂಭಕ್ಕೆ ಸಹಕಾರ ನೀಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಹಾಗೂ IndiGo ಸಂಸ್ಥೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದ ಸಲ್ಲಿಸಿದ್ದಾರೆ. ನೇರ ವಿಮಾನ ಸಂಪರ್ಕ ಹೆಚ್ಚುವುದರಿಂದ ಹುಬ್ಬಳ್ಳಿ–ಧಾರವಾಡ ಸೇರಿದಂತೆ ವಿಶಾಲ ಉತ್ತರ ಕರ್ನಾಟಕ ಪ್ರದೇಶದ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಸಿಎಂ ಡಿಕೆಶಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ; ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸಮಾಲೋಚನೆ
ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ
ಕರ್ನಾಟಕದ ರೈತರೊಂದಿಗೆ ಸುದೀರ್ಘ ಚರ್ಚೆ; ಸಹನೆಯಿಂದ ಸಮಸ್ಯೆ ಆಲಿಸಿದ ಸಚಿವದ್ವಯರು
ಕಬ್ಬು ರೈತರ ಪ್ರತಿಭಟನೆ ಎಫೆಕ್ಟ್‌: ಹುಬ್ಬಳ್ಳಿ-ಧಾರವಾಡದಲ್ಲಿ ಟ್ರಾಫಿಕ್‌ ರೂಟ್‌ ಚೇಂಜ್‌; ಇಲ್ಲಿದೆ ನೋಡಿ ಪರ್ಯಾಯ ಮಾರ್ಗ
ಕಬ್ಬು ಬೆಳೆಗಾರರ ಆಕ್ರೋಶ: ಹಿರೇಬಾಗೇವಾಡಿ ಟೋಲ್‌ನಲ್ಲಿ ರೈತರ ದಿಢೀರ್ ಪ್ರತಿಭಟನೆ
The post ಪ್ರಯಾಣಿಕರಿಗೆ ಗುಡ್‌ನ್ಯೂಸ್: ಹುಬ್ಬಳ್ಳಿ–ಚೆನ್ನೈ ನೇರ ವಿಮಾನ ಸೇವೆ ಪುನರಾರಂಭ appeared first on Samyukta Karnataka.
ಪಕ್ಷದೊಳಗಿನ ಆಂತರಿಕ ಬಂಡಾಯ ತಪ್ಪಿಸಲು ರಾಹುಲ್ ಗಾಂಧಿ ಪ್ರತಿಭಟನೆ
ಧಾರವಾಡ: ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಆಂತರಿಕ ಬಂಡಾಯವನ್ನು ತಪ್ಪಿಸಲು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಎಸ್‌ಐಆರ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಮಾಡುತ್ತಿರುವ ಎಲ್ಲ ತಪ್ಪುಗಳನ್ನು ಮುಚ್ಚಿಹಾಕಲು‌ ಈ ಎಲ್ಲ ನಾಟಕಗಳನ್ನು ಮಾಡುತ್ತಿದ್ದಾರೆ. ಇದು ಕೆಲಸ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಧಾರವಾಡದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾಣೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಆಕಾಶವಾಣಿ ಭವನದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಅವರು ಕಳೆದ 15 ವರ್ಷಗಳಿಂದ ಮಾಡುತ್ತಿರುವ ಎಲ್ಲ ತಪ್ಪುಗಳನ್ನು ಮುಚ್ಚಿಹಾಕಲು ಬಯಸುತ್ತಿದ್ದಾರೆ.
​ಅವರು ಇದನ್ನು ಮಾಡದಿದ್ದರೆ, ಪಕ್ಷದೊಳಗೆ ಆಂತರಿಕ ಬಂಡಾಯ ಎದುರಾಗುತ್ತದೆ. ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಆಂತರಿಕ ಬಂಡಾಯವನ್ನು ತಪ್ಪಿಸಲು, ಅವರು ಈ ಎಲ್ಲ ನಾಟಕಗಳನ್ನು ಮಾಡುತ್ತಿದ್ದಾರೆ. ಅಂತಿಮವಾಗಿ ಇದು ಕೆಲಸ ಮಾಡುವುದಿಲ್ಲ. ಇದು ಕಾಂಗ್ರೆಸ್‌‌ಗೆ ಪ್ರಯೋಜನಕ್ಕೆ ಬರುವುದಿಲ್ಲ. ಸತ್ಯವೇ ಗೆಲ್ಲುತ್ತದೆ ಮತ್ತು ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಈಜಲು ಹೋದ ಮೂವರು ಬಾಲಕರು ನೀರುಪಾಲು
The post ಪಕ್ಷದೊಳಗಿನ ಆಂತರಿಕ ಬಂಡಾಯ ತಪ್ಪಿಸಲು ರಾಹುಲ್ ಗಾಂಧಿ ಪ್ರತಿಭಟನೆ appeared first on Samyukta Karnataka.
ಗಣೇಶ ವಿಸರ್ಜನೆ ವೇಳೆ ಅಶ್ಲೀಲ ನೃತ್ಯ ಆರೋಪ: ಕಲಾವಿದೆ ಸೇರಿ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ
ಹುಬ್ಬಳ್ಳಿ: ನವನಗರದಲ್ಲಿ ನಡೆದ 21ನೇ ದಿನದ ಸನಾತನ ಮಹಾರಾಜ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಅಶ್ಲೀಲ ನೃತ್ಯ ಪ್ರದರ್ಶಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಲಾಗಿದೆ ಎಂದು ಆರೋಪಿಸಿ, ಕಲಾವಿದೆ ನಿಶಾ ಮುಂಬೈಕರ್ ಸೇರಿದಂತೆ ಕಾರ್ಯಕ್ರಮದ ಮುಖ್ಯ ಸಂಘಟಕರು ಹಾಗೂ ನಿರ್ವಹಣಾ ತಂಡದ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ವಕೀಲರೊಬ್ಬರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ನವನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲಾವಿದೆ ನಿಶಾ ಮುಂಬೈಕರ್ ಅವರು ಅಶ್ಲೀಲ ನೃತ್ಯ ಪ್ರದರ್ಶಿಸಿ, ಸಾರ್ವಜನಿಕವಾಗಿ ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ. ಇದರಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕುಟುಂಬಗಳು, ಹಿರಿಯ ನಾಗರಿಕರು ಹಾಗೂ ಭಕ್ತರಿಗೆ ತೀವ್ರ ಕಿರಿಕಿರಿ ಮತ್ತು ಮಾನಸಿಕ ಯಾತನೆ ಉಂಟಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ನಡೆಸಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ನಿಶಾ ಮುಂಬೈಕರ್, ಮುಖ್ಯ ಸಂಘಟಕರು ಹಾಗೂ ಕಾರ್ಯಕ್ರಮ ನಿರ್ವಹಣಾ ತಂಡದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿದಾರರು ಒತ್ತಾಯಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದವರ ಹೇಳಿಕೆ, ದೃಶ್ಯಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ‘ಬೇಲ್’ ಚಿತ್ರತಂಡಕ್ಕೆ ಅದ್ಧೂರಿ ಸ್ವಾಗತ
The post ಗಣೇಶ ವಿಸರ್ಜನೆ ವೇಳೆ ಅಶ್ಲೀಲ ನೃತ್ಯ ಆರೋಪ: ಕಲಾವಿದೆ ಸೇರಿ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ appeared first on Samyukta Karnataka.
‘ಎಸ್‌ಐಆರ್‌ ಪೂರ್ಣಗೊಂಡರೆ ಕಾಂಗ್ರೆಸ್‌ಗೆ ಸೋಲು’
ಹುಬ್ಬಳ್ಳಿ: ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡರೆ ಮುಂದಿನ ಚುನಾವಣೆಯಲ್ಲಿ ಸೋಲು ಖಚಿತ ಎಂಬ ಆತಂಕ ಕಾಂಗ್ರೆಸ್‌ಗೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಮೂಲಕ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋಗಸ್ ಮತದಾನ ಪ್ರಕ್ರಿಯೆಯನ್ನು ತಡೆಗಟ್ಟಲು ಚುನಾವಣಾ ಆಯೋಗ ಕೈಗೊಂಡಿರುವ ಎಸ್‌ಐಆರ್ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರು ಹಾಗೂ ರೋಹಿಂಗ್ಯಾಗಳು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದು, ನಕಲಿ ಮತದಾನ ತಡೆಯಲು ಎಸ್‌ಐಆರ್ ಪ್ರಕ್ರಿಯೆ ಅತ್ಯಗತ್ಯವಾಗಿದೆ. ಅಲ್ಪಸಂಖ್ಯಾತರ ಪಟ್ಟಿಯಲ್ಲಿ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನು ಮತದಾರರನ್ನಾಗಿ ಸೇರಿಸಲಾಗಿದೆ. ಹಲವು ಬೂತ್‌ಗಳಲ್ಲಿ ಒಬ್ಬರೇ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಗಳಿವೆ. ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕದೆ ಬೋಗಸ್ ಮತದಾನ ನಡೆಯುತ್ತಿತ್ತು ಅದನ್ನು ತಪ್ಪಿಸಲು ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.
ಮತದಾರರ ಗುರುತಿನ ಚೀಟಿಯಲ್ಲಿ ಬುರ್ಕಾ ಧರಿಸಿರುವ ಫೋಟೋಗಳ ಬದಲಿಗೆ, ಸ್ಪಷ್ಟವಾಗಿ ಗುರುತಿಸಬಹುದಾದ ಮುಖದ ಫೋಟೋಗಳನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಘೋಷಣೆ: ಮೂವರು ವಿಜ್ಞಾನಿಗಳಿಗೆ ಗೌರವ
The post ‘ಎಸ್‌ಐಆರ್‌ ಪೂರ್ಣಗೊಂಡರೆ ಕಾಂಗ್ರೆಸ್‌ಗೆ ಸೋಲು’ appeared first on Samyukta Karnataka.
ಅರಿಶಿನ, ಖಾರದ ಪುಡಿಯಿಂದ ಹಂಪಿ ರಥ: ಗಿನ್ನೆಸ್ ಪೇಜ್‌ನಲ್ಲೇ ಕಂಗೊಳಿಸಿದ ಕನ್ನಡಿಗನ ಕಲೆ!
ಅರಿಶಿನ–ಮೆಣಸಿನ ಪುಡಿಯಿಂದ 1,892 ಚದರ ಅಡಿ ಹಂಪಿ ರಥದ ಚಿತ್ರ ಚಿತ್ರ; ಧಾರವಾಡದ ಅಮರ್ ಕಾಳೆ ವಿಶ್ವ ದಾಖಲೆ
ಧಾರವಾಡ: ಬಣ್ಣ, ಬ್ರಷ್‌ಗಳ ಬದಲು ಭಾರತೀಯ ಅಡುಗೆಮನೆಯಲ್ಲೇ ಸಾಮಾನ್ಯವಾಗಿ ಬಳಸುವ ಅರಿಶಿನ ಮತ್ತು ಮೆಣಸಿನ ಪುಡಿಗಳನ್ನು ಕಲೆಯ ಮಾಧ್ಯಮವನ್ನಾಗಿ ಮಾಡಿಕೊಂಡು ಧಾರವಾಡದ ಕಲಾವಿದ ಅಮರ್ ರಾಜು ಕಾಳೆ ವಿಶಿಷ್ಟ ಸಾಧನೆ ಮಾಡಿದ್ದಾರೆ. ಮಸಾಲೆಗಳನ್ನು ಬಳಸಿ ರಚಿಸಿದ ಬೃಹತ್ ಚಿತ್ರಕ್ಕಾಗಿ ಅವರು Guinness World Recordsನಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಈ ಕಲೆಯ ದೃಶ್ಯ ಇಂದು ಗಿನ್ನೆಸ್ ಪೇಜ್‌ನಲ್ಲೇ ಕಂಗೊಳಿಸಿದ್ದು ಕನ್ನಡಿಗನ ಕಲೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮರ್ ಕಾಳೆ ಅವರು 2026ರ ಜನವರಿ 27ರಂದು ಧಾರವಾಡದಲ್ಲಿ 1,892.5 ಚದರ ಅಡಿ ವಿಸ್ತೀರ್ಣದ ಚಿತ್ರವನ್ನು ಅರಿಶಿನ ಮತ್ತು ಮೆಣಸಿನ ಪುಡಿ ಬಳಸಿ ರಚಿಸಿದ್ದರು. ಕರ್ನಾಟಕದ ನಕ್ಷೆಯೊಳಗೆ ಹಂಪಿಯ ಪ್ರಸಿದ್ಧ ರಥವನ್ನು ಚಿತ್ರಿಸುವ ಮೂಲಕ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಕಲೆಯ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ದಾಖಲೆಗೆ ಸಂಬಂಧಿಸಿದ ಅಧಿಕೃತ Guinness World Records ಪ್ರಮಾಣಪತ್ರವನ್ನು ಇತ್ತೀಚೆಗೆ ಪಡೆದಿದ್ದಾರೆ.
ಅರಿಶಿನ ಮತ್ತು ಮೆಣಸಿನಕಾಯಿಯಂತಹ ಭಾರತೀಯ ಮಸಾಲೆಗಳ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಮಸಾಲೆ ಪರಂಪರೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ದಾಖಲೆ ಪ್ರಯತ್ನ ಕೈಗೊಂಡಿದ್ದಾಗಿ ಅಮರ್ ಕಾಳೆ ಹೇಳಿದ್ದಾರೆ. ತಮ್ಮ ಸಾಧನೆಯನ್ನು ಬೆಂಬಲಿಸಿದ ಪೋಷಕರಿಗೆ ಅರ್ಪಿಸುವುದಾಗಿ ಅವರು ತಿಳಿಸಿದ್ದಾರೆ.
ಧಾರವಾಡದ ಕಲಾವಿದ ಅಮರ್ ಕಾಳೆ ಅರಿಶಿನ ಮತ್ತು ಮೆಣಸಿನ ಪುಡಿ ಬಳಸಿ 1,892.5 ಚದರ ಅಡಿ ಚಿತ್ರ ರಚಿಸಿ Guinness World Record ನಿರ್ಮಿಸಿದ್ದಾರೆ. ಕರ್ನಾಟಕದ ಸಂಸ್ಕೃತಿ ಮತ್ತು ಹಂಪಿ ರಥವನ್ನು ಕಲೆಯಲ್ಲಿ ಮೂಡಿಸಿದ್ದಾರೆ.
ಸಂಪೂರ್ಣ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿhttps://t.co/d5IrRZPfPd pic.twitter.com/TZKIyTFk8a
— Samyukta Karnataka (@SamyuktaKarnatk) September 29, 2026
ವಿಭಿನ್ನ ಮಾಧ್ಯಮದಲ್ಲಿ ಕಲೆಯ ಪ್ರಯೋಗ : ಅಮರ್ ಕಾಳೆ ಅವರ ಕಲಾ ಪಯಣ ಸಾಂಪ್ರದಾಯಿಕ ಚಿತ್ರಕಲೆಯಷ್ಟಕ್ಕೆ ಸೀಮಿತವಾಗಿಲ್ಲ. ವಿವಿಧ ವಿಶಿಷ್ಟ ವಿಧಾನಗಳಲ್ಲಿ ಚಿತ್ರಗಳನ್ನು ರಚಿಸುವ ಮೂಲಕ ಅವರು ಗಮನ ಸೆಳೆದಿದ್ದಾರೆ. 2026ರಲ್ಲೇ ಮಸಾಲೆ ಪುಡಿಯಿಂದ ಬೃಹತ್ ಚಿತ್ರ ರಚಿಸಿದ ದಾಖಲೆ ಜೊತೆಗೆ, ಬಾಯಿಯನ್ನು ಮಾತ್ರ ಬಳಸಿಕೊಂಡು 1,209 ಚದರ ಅಡಿ ಚಿತ್ರವನ್ನೂ ರಚಿಸಿದ್ದು Guinness World Recordsನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಆ ಚಿತ್ರದಲ್ಲಿ ಭಾರತೀಯ ಸೈನಿಕನ ಚಿತ್ರವನ್ನು ಮೂಡಿಸಿದ್ದರು.
ಇದಕ್ಕೂ ಮೊದಲು 2021ರಲ್ಲಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಚಿತ್ರಿತ ಕೈಮುದ್ರೆಗಳನ್ನೊಳಗೊಂಡ ಕಲಾಕೃತಿ ರಚಿಸಿದ ದಾಖಲೆ ಅವರ ಹೆಸರಿನಲ್ಲಿತ್ತು. ಈ ಮೂಲಕ ಚಿತ್ರಕಲೆಯ ಕ್ಷೇತ್ರದಲ್ಲಿ ಅವರ Guinness ದಾಖಲೆಗಳ ಸಂಖ್ಯೆ ಮೂರಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.
ಧಾರವಾಡದಿಂದ ಜಾಗತಿಕ ವೇದಿಕೆಗೆ : ಸ್ವಯಂ ಕಲಿತ ಕಲಾವಿದರಾಗಿರುವ ಅಮರ್ ಕಾಳೆ, ಹಲವು ವರ್ಷಗಳ ಅಭ್ಯಾಸ ಮತ್ತು ಪ್ರಯೋಗಗಳ ಮೂಲಕ ತಮ್ಮದೇ ಆದ ಚಿತ್ರಕಲಾ ಶೈಲಿಯನ್ನು ಬೆಳೆಸಿಕೊಂಡಿದ್ದಾರೆ. ಧಾರವಾಡದ ಮರಾಠಾ ಕಾಲೋನಿಯಲ್ಲಿರುವ ತಮ್ಮ ಗ್ಯಾಲರಿಯಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದು, ಕರ್ನಾಟಕದ ಹೊರಗೂ ಅವರ ಚಿತ್ರಗಳಿಗೆ ಬೇಡಿಕೆ ಇದೆ. ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ ಮತ್ತು ಯುಎಇ ಸೇರಿದಂತೆ ವಿವಿಧ ದೇಶಗಳಲ್ಲಿರುವ ಗ್ರಾಹಕರಿಗೆ ತಮ್ಮ ಕಲಾಕೃತಿಗಳನ್ನು ಕಳುಹಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಅರಿಶಿನದ ಹಳದಿ ಹಾಗೂ ಮೆಣಸಿನ ಪುಡಿಯ ಬಣ್ಣವನ್ನು ಬಳಸಿಕೊಂಡು ರಚಿಸಿರುವ ಈ ಬೃಹತ್ ಚಿತ್ರವು ಕೇವಲ ಕಲಾ ಪ್ರಯೋಗವಷ್ಟೇ ಅಲ್ಲದೆ, ಕರ್ನಾಟಕದ ಪರಂಪರೆ, ಹಂಪಿಯ ಐತಿಹಾಸಿಕ ಗುರುತು ಮತ್ತು ಭಾರತೀಯ ಮಸಾಲೆ ಸಂಸ್ಕೃತಿಯನ್ನು ಒಂದೇ ಕಲಾಕೃತಿಯಲ್ಲಿ ಸಂಯೋಜಿಸುವ ಪ್ರಯತ್ನವಾಗಿದೆ. ಈ ವಿಭಿನ್ನ ಪ್ರಯೋಗದ ಮೂಲಕ ಧಾರವಾಡದ ಕಲಾವಿದ ಅಮರ್ ಕಾಳೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.
The post ಅರಿಶಿನ, ಖಾರದ ಪುಡಿಯಿಂದ ಹಂಪಿ ರಥ: ಗಿನ್ನೆಸ್ ಪೇಜ್‌ನಲ್ಲೇ ಕಂಗೊಳಿಸಿದ ಕನ್ನಡಿಗನ ಕಲೆ! appeared first on Samyukta Karnataka.
ಮಧ್ಯಾಹ್ನದ ಗಡುವು ಮುಕ್ತಾಯ ಸಚಿವ ಜೋಶಿ ಮನೆಯತ್ತ ರೈತರು
ಹುಬ್ಬಳ್ಳಿ: ʻಸ್ವಾಮಿನಾಥನ್ ಆಯೋಗ ವರದಿ ಜಾರಿ ಹಾಗೂ ಕಬ್ಬಿಗೆ ಕನಿಷ್ಠ ಬೆಂಬಲ ನೀಡುವ ಕುರಿತು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು(ಮಂಗಳವಾರ) ಮಧ್ಯಾಹ್ನ 3 ಗಂಟೆಯೊಳಗೆ ಸ್ಪಷ್ಟ ನಿರ್ಧಾರ ತಿಳಿಸಬೇಕು. ಇಲ್ಲದಿದ್ದರೆ ಇಲ್ಲಿ ನೆರದ ರೈತರು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಅವರ ನಿವಾಸಕ್ಕೆ ಮುತ್ತಿಗೆ ಹಾಕಿದರೂ ಅಚ್ಚರಿಯಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ʻಸಚಿವ ಜೋಶಿ ಅವರು ವಿಡಿಯೋ ಸಂದೇಶದಲ್ಲಿ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಕಬ್ಬು ಬೆಳೆಗಾರರಲ್ಲಿ ಉಂಟಾಗಿರುವ ಗೊಂದಲ, ಸಮಸ್ಯೆಗಳನ್ನು ಚರ್ಚಿಸಲು ದೆಹಲಿಗೆ ಆಹ್ವಾನಿಸುತ್ತೇವೆ ಎಂದಿದ್ದಾರೆ. ನಾವೇನು ಅವರ ಪಕ್ಷದ ಕಾರ್ಯಕರ್ತರಲ್ಲ. ದೇಶಕ್ಕೆ ಅನ್ನ ನೀಡುವ ರೈತರಾಗಿದ್ದು, ಅವರೇ ಇಲ್ಲಿಗೇ ಬರಬೇಕು’ ಎಂದು ಆಗ್ರಹಿಸಿದರು.
ಈಗಾಗಲೇ ಚನ್ನಮ್ಮ ವೃತ್ತದಲ್ಲಿ ವಿವಿಧ ಜಿಲ್ಲೆಗಳಿಂದ, ರಾಜ್ಯಗಳಿಂದ ಐದು ಸಾವಿರಕ್ಕೂ ಹೆಚ್ಚು ಮಂದಿ ರೈತರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಸಾಕಷ್ಟು ಮಂದಿ ಇನ್ನೂ ಬರುತ್ತಿದ್ದಾರೆ. ನಗರದ ಹೊರವಲಯದಲ್ಲಿ ರೈತರ ವಾಹನಗಳನ್ನು ತಡೆದು ನಿಲ್ಲಿಸಲಾಗಿದೆ. ಪ್ರತಿಭಟನೆ ಕೈ ಮೀರುವ ಮೊದಲು ರೈತರ ಬೇಡಿಕೆ ಈಡೇರಿಸುವ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಬಾರಕೋಲು ಚಳವಳಿ ನಡೆಸಿ, ಹಸಿರು ಟವೆಲ್ ಪ್ರದರ್ಶಿಸಿ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಕೇಂದ್ರ ಸಚಿವ ಪ್ಲಲ್ಹಾದ ಜೋಶಿ ಅವರ ನಿವಾಸ ಹಾಗೂ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ: ಹೆಚ್ಚಿನ ಬಂದೋಬಸ್ತ್ – ಸಚಿವರಿಗೆ 3 ಗಂಟೆವರೆಗೆ ಗಡುವು
The post ಮಧ್ಯಾಹ್ನದ ಗಡುವು ಮುಕ್ತಾಯ ಸಚಿವ ಜೋಶಿ ಮನೆಯತ್ತ ರೈತರು appeared first on Samyukta Karnataka.
ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ: ಹೆಚ್ಚಿನ ಬಂದೋಬಸ್ತ್ – ಸಚಿವರಿಗೆ 3 ಗಂಟೆವರೆಗೆ ಗಡುವು
ಹುಬ್ಬಳ್ಳಿ: ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು, ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಹಾಗೂ ಲಾಭದಾಯಕ ಬೆಲೆ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ಹುಬ್ಬಳ್ಳಿಯಲ್ಲಿ ಬೃಹತ್ ರೈತರ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದಲ್ಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕಚೇರಿ ಹಾಗೂ ನಿವಾಸದ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನೆಹರು ಮೈದಾನದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳದ ಸುತ್ತಲೂ ವಿಶೇಷ ಬಂದೋಬಸ್ತ್ ಮಾಡಲಾಗಿದೆ. 250ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ನಗರದ ಪ್ರಮುಖ ವೃತ್ತಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ.
ರೈತರು ಈಗಾಗಲೇ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ಬಳಿಕ ನೆಹರು ಮೈದಾನದತ್ತ ತೆರಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
ಪ್ರಮುಖ ಬೇಡಿಕೆಗಳೇನು? : ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳಲ್ಲಿ ಸ್ವಾಮಿನಾಥನ್ ಆಯೋಗದ ಪ್ರಮುಖ ಶಿಫಾರಸುಗಳ ಅನುಷ್ಠಾನ, ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಹಾಗೂ ರೈತರ ಪರಿಶ್ರಮವನ್ನು ಪರಿಗಣಿಸಿ ವೈಜ್ಞಾನಿಕ ಮತ್ತು ಯೋಗ್ಯ ಬೆಲೆ ನಿಗದಿ, ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿ ಸೇರಿದಂತೆ ಹಲವು ವಿಚಾರಗಳಿವೆ.
ಇದರ ಜತೆಗೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸಬೇಕು, ಕರ್ನಾಟಕದಲ್ಲಿ ಉತ್ಪಾದನೆಯಾಗುವ ಎಥನಾಲ್‌ನ ಹೆಚ್ಚಿನ ಪ್ರಮಾಣದ ಮಾರಾಟಕ್ಕೆ ಅವಕಾಶ ನೀಡಬೇಕು ಹಾಗೂ ರೈತರ ಆದಾಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನೂ ರೈತ ಸಂಘಟನೆಗಳು ಮುಂದಿಟ್ಟಿವೆ.
ಜೋಶಿ ನಿವಾಸದ ಮುಂದೆ ಪ್ರತಿಭಟನೆಗೆ ಕರೆ : ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹುಬ್ಬಳ್ಳಿ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಈ ಹಿಂದೆ ಘೋಷಿಸಿದ್ದರು. ಸೆ.29ರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟನೆಗಳು ತಿಳಿಸಿದ್ದವು.
ಈ ಹಿನ್ನೆಲೆಯಲ್ಲಿ ಜೋಶಿ ಅವರ ನಿವಾಸ ಹಾಗೂ ಕಚೇರಿ ಸುತ್ತಮುತ್ತ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಹೆಚ್ಚಿಸಿದ್ದಾರೆ. ನಗರದಲ್ಲಿ ಸಂಚಾರ ಮತ್ತು ಸಾರ್ವಜನಿಕರ ಓಡಾಟದ ಮೇಲೂ ಪ್ರತಿಭಟನೆಯ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.
ರೈತರ ಆಕ್ರೋಶ : ಕೃಷಿ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ರೈತರು ಬೆಳೆಯುವ ಉತ್ಪನ್ನಗಳಿಗೆ ಅದಕ್ಕೆ ಅನುಗುಣವಾದ ಆದಾಯ ಸಿಗುತ್ತಿಲ್ಲ ಎಂಬುದು ರೈತ ಸಂಘಟನೆಗಳ ಪ್ರಮುಖ ವಾದವಾಗಿದೆ. ವಿಶೇಷವಾಗಿ ಕಬ್ಬು ಬೆಳೆಗಾರರ ವಿಚಾರದಲ್ಲಿ ಉತ್ಪಾದನಾ ವೆಚ್ಚ ಮತ್ತು ದೊರೆಯುತ್ತಿರುವ ಬೆಲೆಯ ನಡುವಿನ ಅಂತರವನ್ನು ಕಡಿಮೆ ಮಾಡಬೇಕು ಎಂದು ಸಂಘಟನೆಗಳು ಒತ್ತಾಯಿಸುತ್ತಿವೆ.
ಹೀಗಾಗಿ ಸೆ.29ರ ಹುಬ್ಬಳ್ಳಿ ಪ್ರತಿಭಟನೆ ರೈತರ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಪ್ರಮುಖ ಹೋರಾಟವಾಗಿ ರೂಪುಗೊಂಡಿದೆ. ಪ್ರತಿಭಟನೆಯ ಮುಂದಿನ ಹಂತದಲ್ಲಿ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಮಾತುಕತೆ ನಡೆಯುತ್ತದೆಯೇ ಮತ್ತು ಬೇಡಿಕೆಗಳ ಕುರಿತು ಯಾವುದೇ ನಿರ್ಧಾರ ಹೊರಬರುತ್ತದೆಯೇ ಎಂಬುದು ಗಮನ ಸೆಳೆದಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.
The post ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ: ಹೆಚ್ಚಿನ ಬಂದೋಬಸ್ತ್ – ಸಚಿವರಿಗೆ 3 ಗಂಟೆವರೆಗೆ ಗಡುವು appeared first on Samyukta Karnataka.
IIT ಧಾರವಾಡದಲ್ಲಿ ಸಂಸ್ಕೃತ ಪ್ರಮಾಣಪತ್ರ, ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಆರಂಭ
ಧಾರವಾಡ: ಸಂಸ್ಕೃತ ಭಾಷೆ ಹಾಗೂ ಸಾಹಿತ್ಯವನ್ನು ಕಲಿಯಲು ಆಸಕ್ತರಿಗೆ ಮಹತ್ವದ ಅವಕಾಶ ದೊರೆತಿದ್ದು, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಐಐಟಿ ಧಾರವಾಡದ ಜಂಟಿ ಸಹಯೋಗದಲ್ಲಿ ನಡೆಸಲಾಗುವ ಸಂಸ್ಕೃತ ಪ್ರಮಾಣಪತ್ರ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ 2026–27ನೇ ಶೈಕ್ಷಣಿಕ ಅವಧಿಯ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
ಸಂಸ್ಕೃತ ಭಾಷೆಯ ಮೂಲಭೂತ ಜ್ಞಾನದಿಂದ ಮುಂದುವರಿದ ಅಧ್ಯಯನದವರೆಗೆ ಆಸಕ್ತಿ ಹೊಂದಿರುವವರು ಈ ಕೋರ್ಸ್‌ಗಳ ಮೂಲಕ ಸಂಸ್ಕೃತ ಭಾಷೆ ಮತ್ತು ಅದರ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಕಲಿಯಲು ಅವಕಾಶ ಪಡೆಯಬಹುದಾಗಿದೆ.
IIT ಧಾರವಾಡ ಮತ್ತು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು ಈಗಾಗಲೇ ಸಂಸ್ಕೃತ ಭಾಷೆಯ ಕಲಿಕೆ ಮತ್ತು ಪರಿಚಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. 2026ರ ಆಗಸ್ಟ್‌ 25ರಿಂದ 31ರವರೆಗೆ IIT ಧಾರವಾಡದಲ್ಲಿ ವಿಶ್ವ ಸಂಸ್ಕೃತ ದಿನದ ಅಂಗವಾಗಿ ಸಂಸ್ಕೃತ ವಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿದಿನ ಸರಳ ಸಂಸ್ಕೃತ ಸಂಭಾಷಣಾ ತರಗತಿಗಳನ್ನು ನಡೆಸಲಾಗಿತ್ತು.
ಇದೀಗ ಇದೇ ಸಹಯೋಗದಡಿ 2026–27ರ ಸಂಸ್ಕೃತ ಪ್ರಮಾಣಪತ್ರ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಿಸಿರುವುದಾಗಿ IIT ಧಾರವಾಡ ಪ್ರಕಟಿಸಿದೆ. ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಆನ್‌ಲೈನ್‌ನಲ್ಲಿ ಪ್ರವೇಶ : ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಕೈಗೊಳ್ಳಲಾಗುತ್ತಿದೆ. ಆಸಕ್ತರು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ SAMARTH ಪ್ರವೇಶ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರವೇಶ ಲಿಂಕ್: csucsl.samarth.edu.in ಹೆಚ್ಚಿನ ಮಾಹಿತಿಗಾಗಿ IIT ಧಾರವಾಡ ಕೇಂದ್ರ ಸಂರ್ಪಕಿಸಬಹುದಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಕೋರ್ಸ್‌ನ ಅರ್ಹತೆ, ಅವಧಿ, ಶುಲ್ಕ, ತರಗತಿ ವಿಧಾನ ಹಾಗೂ ಕೊನೆಯ ದಿನಾಂಕ ಸೇರಿದಂತೆ ಸಂಪೂರ್ಣ ವಿವರಗಳನ್ನು ಅಧಿಕೃತ ಪ್ರವೇಶ ಪೋರ್ಟಲ್‌ನಲ್ಲಿ ಪರಿಶೀಲಿಸುವುದು ಸೂಕ್ತ.
ಸಂಸ್ಕೃತವನ್ನು ಹೊಸದಾಗಿ ಕಲಿಯಲು ಬಯಸುವವರು ಮಾತ್ರವಲ್ಲದೆ, ಭಾಷೆ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯಲು ಬಯಸುವವರಿಗೂ ಈ ಕೋರ್ಸ್‌ಗಳು ಉಪಯುಕ್ತವಾಗಬಹುದಾಗಿದೆ. IIT ಧಾರವಾಡದಲ್ಲಿ ಸಂಸ್ಕೃತ ಸಂಬಂಧಿತ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇತ್ತೀಚೆಗೆ ನೀಡಲಾಗುತ್ತಿರುವ ಆದ್ಯತೆಯ ಹಿನ್ನೆಲೆಯಲ್ಲಿ ಈ ಪ್ರವೇಶಾತಿ ಗಮನ ಸೆಳೆದಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.
The post IIT ಧಾರವಾಡದಲ್ಲಿ ಸಂಸ್ಕೃತ ಪ್ರಮಾಣಪತ್ರ, ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಆರಂಭ appeared first on Samyukta Karnataka.
ಗಣೇಶ ವಿಸರ್ಜನೆಗೆ ಪೊಲೀಸರ ಮಾರ್ಗಸೂಚಿ; ಡಿಜೆ ಪೈಪೋಟಿ ಬೇಡ, ಶಾಂತಿ ಕಾಪಾಡಿ
ಹುಬ್ಬಳ್ಳಿ: ಇಂದು ಸಂಜೆ 11 ದಿನದ ಸಾರ್ವಜನಿಕ ಗಣೇಶಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತಾಲಯವು ಸಾರ್ವಜನಿಕರಿಗೆ ಮಾರ್ಗಸೂಚಿ ಪ್ರಕಟಿಸಿದೆ.
ವಿಸರ್ಜನಾ ಮೆರವಣಿಗೆ ಮಾರ್ಗದಲ್ಲಿ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನೇ ಬಳಸಬೇಕು. ಮಹಿಳೆಯರು, ಹಿರಿಯ ನಾಗರಿಕರು ಮತ್ತು ಚಿಕ್ಕ ಮಕ್ಕಳು ಹೆಚ್ಚು ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಬೇಕು.
ಮೆರವಣಿಗೆಯಲ್ಲಿ ಕುಣಿಯುವಾಗ ಮೊಬೈಲ್ ಕಳೆದುಹೋಗುವ ಪ್ರಕರಣ ಹೆಚ್ಚಾಗುತ್ತಿದ್ದು, ಸಾಧ್ಯವಾದರೆ ಮೊಬೈಲ್ ಮನೆಯಲ್ಲಿಡಿ, ಇಲ್ಲವಾದರೆ ಮುಂಭಾಗದ ಜೇಬಿನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಜನಸಂದಣಿಯಲ್ಲಿ ಚಪ್ಪಲಿ ಬದಲು ಶೂ ಧರಿಸುವುದು ಸುರಕ್ಷಿತ ಎಂದು ಪೊಲೀಸರು ತಿಳಿಸಿದ್ದಾರೆ.
ಮೆರವಣಿಗೆ ಅಥವಾ ಡಿಜೆ ನಡುವೆ ಸ್ಪರ್ಧೆ ಬೇಡ, ಶಾಂತಿ-ಸೌಹಾರ್ದ ಕಾಪಾಡಬೇಕು. ವಿಸರ್ಜನಾ ಸ್ಥಳಗಳಲ್ಲಿ ಮಕ್ಕಳನ್ನು ನೀರು ಮತ್ತು ಕ್ರೇನ್‌ಗಳಿಂದ ದೂರವಿಡಬೇಕು.
ಈ ಬಾರಿ ಮೆರವಣಿಗೆ ವೇಳೆ ಆಲ್ಕೋ ಬ್ರೀತ್ ಅನಲೈಸರ್, ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಮತ್ತು ನಾರ್ಕೋಟಿಕ್ಸ್ ಅನಲೈಸರ್ ಮೂಲಕ ತಪಾಸಣೆ ನಡೆಸಲಾಗುವುದು. ಸಂಚಾರ ಮತ್ತು ವಿಸರ್ಜನೆ ವೇಳೆ ಪೊಲೀಸರ ಸೂಚನೆ ಪಾಲಿಸಬೇಕು ಎಂದು ಆಯುಕ್ತಾಲಯದ ಪ್ರಕಟಣೆ ತಿಳಿಸಿದೆ.
The post ಗಣೇಶ ವಿಸರ್ಜನೆಗೆ ಪೊಲೀಸರ ಮಾರ್ಗಸೂಚಿ; ಡಿಜೆ ಪೈಪೋಟಿ ಬೇಡ, ಶಾಂತಿ ಕಾಪಾಡಿ appeared first on Samyukta Karnataka.