ಬೆಂಗಳೂರು: ಏರ್‌ಟೆಲ್ ತನ್ನ ಏರ್‌ಟೆಲ್ ಕ್ಲೌಡ್ ಅಭಿವೃದ್ಧಿಗಾಗಿ ಐಬಿಎಂ (IBM) ಜೊತೆಗೆ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಕೈಜೋಡಿಸಿದೆ. ಈ ಒಪ್ಪಂದದಡಿ, ಏರ್‌ಟೆಲ್ ಕ್ಲೌಡ್‌ನ ವಿಶ್ವಾಸಾರ್ಹತೆ, ಭದ್ರತೆ ಮತ್ತು ಡೇಟಾ ರೆಸಿಡೆನ್ಸಿ ಸಾಮರ್ಥ್ಯವನ್ನು ಐಬಿಎಂನ ಕ್ಲೌಡ್ ತಂತ್ರಜ್ಞಾನ, ಎಐ (AI) ಇನ್‌ಫರೆನ್ಸಿಂಗ್ ಮತ್ತು ಮೂಲಸೌಕರ್ಯಗಳೊಂದಿಗೆ ಸಂಯೋಜಿಸಲಾಗುತ್ತದೆ.
ಈ ಸಹಭಾಗಿತ್ವದ ಮೂಲಕ ಬ್ಯಾಂಕಿಂಗ್, ವೈದ್ಯಕೀಯ, ಸರ್ಕಾರ ಸೇರಿದಂತೆ ವಿವಿಧ ಕ್ಷೇತ್ರಗಳ ಗ್ರಾಹಕರು ಐಬಿಎಂ ಪವರ್ 11 ಎಐ-ರೆಡಿ ಸರ್ವರ್‌ಗಳನ್ನು ಸರ್ವಿಸ್ ರೂಪದಲ್ಲಿ ಬಳಸಿಕೊಳ್ಳಬಹುದಾಗಿದೆ. ಇದರಿಂದ ಎಂಟರ್‌ಪ್ರೈಸ್‌ಗಳು ಆನ್-ಪ್ರಿಮೈಸ್, ಮಲ್ಟಿಕ್ಲೌಡ್ ಹಾಗೂ ಎಡ್ಜ್ ಪರಿಸರಗಳಲ್ಲಿ ದಕ್ಷ ಎಐ ವರ್ಕ್‌ಲೋಡ್ ನಿರ್ವಹಣೆಗೆ ಸಾಧ್ಯವಾಗಲಿದೆ.
ಏರ್‌ಟೆಲ್‌ನ ಉಪಾಧ್ಯಕ್ಷ ಗೋಪಾಲ್ ವಿಟ್ಟಲ್ ಅವರು, “ಈ ಪಾಲುದಾರಿಕೆಯಿಂದ ಭಾರತದಲ್ಲಿ ಏರ್‌ಟೆಲ್ ಕ್ಲೌಡ್ ವಲಯಗಳನ್ನು ನಾಲ್ಕರಿಂದ ಹತ್ತಕ್ಕೆ ವಿಸ್ತರಿಸಲಾಗುತ್ತಿದೆ ಹಾಗೂ ಮುಂಬೈ ಮತ್ತು ಚೆನ್ನೈನಲ್ಲಿ ಎರಡು ಹೊಸ ಮಲ್ಟಿಜೋನ್ ರೀಜನ್‌ಗಳು ಸ್ಥಾಪನೆಯಾಗಲಿವೆ,” ಎಂದರು.
ಐಬಿಎಂನ ರಾಬ್ ಥಾಮಸ್ ಅವರು, “ಭಾರತದ ಗ್ರಾಹಕರು ಐಬಿಎಂ ಕ್ಲೌಡ್‌ನೊಂದಿಗೆ ಎಐ ಯುಗದಲ್ಲಿ ಎಂಟರ್‌ಪ್ರೈಸ್‌ಗಳ ಪರಿವರ್ತನೆಗೆ ವೇಗ ನೀಡುವಂತಾಗುತ್ತದೆ,” ಎಂದಿದ್ದಾರೆ. ಈ ಒಕ್ಕೂಟದೊಂದಿಗೆ, ಭಾರತದಲ್ಲಿ ಎಐ, ಹೈಬ್ರಿಡ್ ಕ್ಲೌಡ್ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳಿಗೆ ಬಾಗಿಲು ತೆರೆಯಲಾಗಿದೆ.