ಚಿತ್ರದುರ್ಗ: ಜವನಗೊಂಡನಹಳ್ಳಿ ಬಳಿ ಭೀಕರ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೃತದೇಹಗಳನ್ನು ಪೊಲೀಸ್ ಅಧಿಕಾರಿಗಳು ಭಾನುವಾರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.
ಕಂಟೇನರ್ ಲಾರಿ ಡಿಕ್ಕಿಯಾಗಿ ಸೀಬರ್ಡ್ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ್ದ ಅವಘಡದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಬಸ್-ಲಾರಿ ಚಾಲಕರಿಬ್ಬರು ಮೃತಪಟ್ಟಿದ್ದರು. ಅವರ ಗುರುತು ನಿಖರವಾಗಿತ್ತು.
ಆದರೆ, ಬಸ್‌ನಲ್ಲಿ ಮೃತಪಟ್ಟಿದ್ದ ಐವರು ಪ್ರಯಾಣಿಕರ ಮೃತದೇಹ ಪತ್ತೆಗಾಗಿ ಪೊಲೀಸ್ ಇಲಾಖೆ ಡಿಎನ್‌ಎ ಪರೀಕ್ಷೆ ಮೊರೆ ಹೋಗಿತ್ತು. ಭಾನುವಾರ ಬೆಳಗ್ಗೆ ಡಿಎನ್‌ಎ ವರದಿ ಕೈ ಸೇರುತ್ತಿದ್ದಂತೆ 9.30ಕ್ಕೆ ಕುಟುಂಬದ ಸದಸ್ಯರಿಗೆ ಮೃತದೇಹಗಳನ್ನು ಹಸ್ತಾಂತರಿಸಿದರು.
ಈ ವೇಳೆ ಕುಟುಂಬದ ಸದಸ್ಯರಿಗೆ ಪೊಲೀಸ್ ಅಧಿಕಾರಿಗಳು ಸಾಂತ್ವನ ಹೇಳಿ, ಮುಂದಿನ ದಿನಗಳಲ್ಲಿ ಪರಿ ಹಾರ ಸೇರಿ ಎಲ್ಲ ರೀತಿಯ ಪ್ರಕ್ರಿಯೆಯಲ್ಲಿ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದರು.









