ಚಿಕ್ಕಮಗಳೂರು: ಸಮೀಕ್ಷೆಗೆ ಗೈರು – 18 ಮಂದಿಗೆ ನೋಟಿಸ್

0
39

ಚಿಕ್ಕಮಗಳೂರು: ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿದ್ದು, ಸಮೀಕ್ಷೆಗೆ ಗೈರಾಗಿದ್ದ ಶಿಕ್ಷಕರಿಗೆ ಕಾರಣ ಕೇಳಿ ಇದೀಗ ನೋಟಿಸ್ ಜಾರಿಗೊಳಿಸಲಾಗಿದೆ. ಶಿಕ್ಷಕರಿಗೆ ಕಾರಣ ಕೇಳಿ ಜಿಲ್ಲೆಯ 18 ಮಂದಿಗೆ ಚಿಕ್ಕಮಗಳೂರು ಡಿಡಿಪಿಐ ನೋಟಿಸ್ ಜಾರಿ ಮಾಡಿದ್ದಾರೆ.

ಸಮೀಕ್ಷೆ ಆರಂಭವಾದ ದಿನದಿಂದ ಶಿಕ್ಷಕರು ಗೈರಾಗಿದ್ದಾರೆ. ಗೈರಾದ 18 ಶಿಕ್ಷಕರಿಗೆ ಡಿಡಿ ಪಿಐ ತಿಮ್ಮರಾಜು ನೋಟಿಸ್ ನೀಡಿದ್ದಾರೆ. ಗೈರು ಆಗಿರುವುದಕ್ಕೆ ಕಾರಣ ಕೇಳಿ ಕ್ರಮದ ಎಚ್ಚರಿಕೆ ನೀಡಿ ನೋಟಿಸ್ ನೀಡಿದ್ದಾರೆ. ಡಿಡಿಪಿಐ ಅಥವಾ ತಹಶೀಲ್ದಾರ್‌ಗೆ ದಾಖಲೆ ನೀಡುವಂತೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 2880 ಶಿಕ್ಷಕರು ಸಮೀಕ್ಷೆಗೆ ನೇಮಕವಾಗಿದ್ದಾರೆ.

ನೇಮಕವಾದ 2880 ಶಿಕ್ಷಕರ ಪೈಕಿ 18 ಶಿಕ್ಷಕರು ಮೊದಲ ದಿನದಿಂದಲೇ ಸಮೀಕ್ಷೆಗೆ ಗೈರಾಗಿದ್ದಾರೆ. ಕಳಸ ಹಾಗೂ ಶೃಂಗೇರಿ ತಾಲೂಕಿನಲ್ಲಿ ಅತಿ ಕಡಿಮೆ ಸಮೀಕ್ಷೆ ನಡೆದಿದೆ ಸಮೀಕ್ಷೆಗೆ ಗೈರಾಗಿದ್ದಕ್ಕೆ ಕಾರಣ ಕೇಳಿ ಎಚ್ಚರಿಕೆ ಕ್ರಮ ನೀಡಿ ನೋಟಿಸ್ ನೀಡಿದ್ದಾರೆ.

Previous articleಹಿಪ್ಪರಗಿ ಬ್ಯಾರೇಜ್: 10 ಗೇಟ್‌ಗಳು ಓಪನ್, ವಿಜಯಪುರ-ಸೊಲ್ಲಾಪುರ ಹೆದ್ದಾರಿ ಮತ್ತೆ ಬಂದ್
Next articleಪ್ರತ್ಯೇಕ ರಾಜ್ಯ ಮಾಡುವುದಕ್ಕೆ ನನ್ನ ಸಹಮತವಿದೆ: ರಾಜು ಕಾಗೆ

LEAVE A REPLY

Please enter your comment!
Please enter your name here