ನವೆಂಬರ್‌ಗೆ ಸಚಿವ ಸಂಪುಟ ವಿಸ್ತರಣೆ – ಸಚಿವ ಜಮೀರ್ ಅಹ್ಮದ್ ‌ಖಾನ್

0
54

ಬಳ್ಳಾರಿ: ರಾಜ್ಯ ಸರ್ಕಾರದಿಂದ ಸಚಿವ ಸಂಪುಟ ಪುನಾರಚನೆ ನವೆಂಬರ್ ತಿಂಗಳಲ್ಲಿ ಆಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರದಲ್ಲಿ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ. ಆದ್ದರಿಂದ ಅದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಿಲ್ಲ. ಈಗಾಗಲೇ ಎಸ್‌ಐಟಿ ಸಂಸ್ಥೆಯು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಗ್ರಾಮೀಣ ಶಾಸಕ ಬಿ‌.ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಇನ್ನೂ ಹದಿನೈದು ದಿನಗಳಲ್ಲಿ ನಾಗೇಂದ್ರ ಮತ್ತೋಮ್ಮೆ ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಜಿಲ್ಲೆಯಲ್ಲಿ ‌ನಡೆಯಲಿರುವ 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿ ‌ಮೂರು ಸ್ಥಳಗಳಲ್ಲಿ ಗುರುತಿಸಲಾಗಿದೆ. ಇದರಲ್ಲಿ ವಿಎಸ್‌ಕೆ ವಿವಿ ಮುಂಭಾಗ, ಸಂಗನಕಲ್ಲು ರಸ್ತೆಯಲ್ಲಿನ‌ ಬಯಲು ಪ್ರದೇಶ ಸೇರಿದಂತೆ ‌ಮೂರು ಕಡೆ ಸ್ಥಳ ಪರಿಶೀಲಿಸಲಾಗಿದೆ‌. ಕೆಲ ದಿನದಲ್ಲೇ ಒಂದು ಸ್ಥಳ ನಿರ್ಧಾರ ಮಾಡಲಾಗುವುದು ಎಂದರು.

ಕಸಾಪ ಅಧ್ಯಕ್ಷ ‌ಡಾ.ಮಹೇಶ ಜೋಶಿ ಅವರ ವಿರುದ್ಧ ಕೆಲ ಆರೋಪಗಳು ವ್ಯಕ್ತವಾಗಿರುವುದರಿಂದ ಸ್ವಾಗತ ಸಮಿತಿ ವಿಳಂಬವಾಗಿದೆ. ಮುಂದಿನ ವಾರ ಸ್ವಾಗತ ಸಮಿತಿ ರಚನೆಯಾಗುವ ಸಾಧ್ಯತೆಯಿದ್ದು, ಬಹುತೇಕವಾಗಿ ಡಿಸೆಂಬರ್‌‌ನಲ್ಲಿ ಸಮ್ಮೇಳನ ನಡೆಯಲಿದೆ ಎಂದು ಭರವಸೆ ನೀಡಿದರು. ಶಾಸಕರಾದ ಬಿ.ನಾಗೇಂದ್ರ, ನಾರಾ ಭರತರೆಡ್ಡಿ ಇದ್ದರು.

Previous articleಬೆಂಗಳೂರು: ಜೆಸಿಬಿ ಘರ್ಜನೆ, 7.69 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು
Next articleಕುರುಬ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ: ಹೋರಾಟ, ವರದಿ ಮತ್ತು ಮುಂದಿನ ಹಾದಿ

LEAVE A REPLY

Please enter your comment!
Please enter your name here