ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ

0
17

ಬೆಂಗಳೂರು: ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ದ್ವಿತೀಯ ಪಿಯುಸಿ 3ನೇ ಪರೀಕ್ಷೆಯು ಜೂನ್ 6 ರಿಂದ ಆರಂಭವಾಗಲಿದ್ದು ಜೂನ್‌20 ರ ರವರೆಗೆ ನಡೆಯಲಿವೆ, ದ್ವಿತೀಯ ಪಿಯುಸಿ ಪರೀಕ್ಷೆ 1 ಹಾಗೂ 2ರ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳು ಆತಂಕ, ಹತಾಶೆಗೆ ಒಳಗಾಗುವ ಅಗತ್ಯವಿಲ್ಲದೆ. ಯಾವುದೇ ಶುಲ್ಕವಿಲ್ಲದೆ ಪರೀಕ್ಷೆ -3 ಅನ್ನು ಬರೆದು ಉತ್ತೀರ್ಣರಾಗುವ ಅವಕಾಶವನ್ನು ಸರ್ಕಾರ ಒದಗಿಸಿಕೊಟ್ಟಿದೆ, ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆಗಳು ನಡೆಯಲಿದ್ದು. ದ್ವಿತೀಯ ಪಿಯುಸಿ 3ನೇ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ

ಜೂನ್ 6 ರಂದು ಕನ್ನಡ, ಅರೇಬಿಕ್, ಜೂನ್ 10 – ಇತಿಹಾಸ, ಭೌತಶಾಸ್ತ್ರ, ಜೂನ್ 11 – ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್, ಜೀವಶಾಸ್ತ್ರ, ಜೂನ್ 12 – ಅರ್ಥಶಾಸ್ತ್ರ, ರಸಾಯನಶಾಸ್ತ್ರ, ಜೂನ್ 13 – ಇಂಗ್ಲಿಷ್, ಜೂನ್ 14 – ತರ್ಕಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್, ಗಣಿತ, ಶಿಕ್ಷಣ, ಹೋಮ್ ಸೈನ್ಸಸ್, ಜೂನ್ 16 – ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಜಿಯೋಗ್ರಫಿ, ಜೂನ್ 17 – ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಜೂನ್ 18 – ಹಿಂದಿ, ಜೂನ್ 19 – ಮನೋವಿಜ್ಞಾನ, ಭೂಗೋಳಶಾಸ್ತ್ರ, ಮೂಲ ಗಣಿತ, ಜೂನ್ 20 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ (ಬೆಳಗಿನ ಅವಧಿ). ಜೂನ್ 20 – ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಬ್ಯೂಟಿ ಆ್ಯಂಡ್ ವೆಲ್​ನೆಸ್ (ಮಧ್ಯಾಹ್ನದ ಅವಧಿ ಮಧ್ಯಾಹ್ನ 2.15 ರಿಂದ ಸಂಜೆ 4.30 ರವರೆಗೆ).

ದ್ವಿತೀಯ ಪಿಯು ಪರೀಕ್ಷೆ-3 ವೇಳಾಪಟ್ಟಿ ಮತ್ತು ಮಾಹಿತಿಯನ್ನು ಜಾಲತಾಣ https://kseab.karnataka.gov.in/ ನಲ್ಲಿ ಪಡೆಯಬಹುದಾಗಿದೆ.

Previous articleಮಯೂರನಿಗೆ ಸುವರ್ಣ ಸಂಭ್ರಮ: ಅಂಕಲಿಯಲ್ಲಿ ತಾರಾ ಮೆರುಗು
Next articleಜೂನ್‌ನಲ್ಲಿ ಭಾರತದಿಂದ ಐಫೋನ್‌ ರವಾನೆಯ ನಿರೀಕ್ಷೆ