ಮಹಿಳೆಯರಿಂದ ಮಕ್ಕಳ ಕಳ್ಳತನಕ್ಕೆ ಯತ್ನ, ಮಗುವಿನ ತಾಯಿಗೆ ಚೂರಿ ಇರಿದು ಪರಾರಿ

0
51

ಕಾಪು: ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಇಬ್ಬರು ಬುರ್ಕಾದಾರಿ ಮಹಿಳೆಯರು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದು, ಮಗುವಿನ ತಾಯಿಯ ಸಮಯ ಪ್ರಜ್ಞೆಯಿಂದ ಅಪಹರಣ ತಪ್ಪಿದೆ. ಇದೇ ಸಂದರ್ಭ ಮಗುವಿನ ತಾಯಿಗೆ ಚೂರಿ ಇರಿದು ಪರಾರಿ ಆದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಬೆಳಪು ಜನತಾಕಾಲನಿಯ ಮೊಹಮ್ಮದ್ ಆಲಿ ಎಂಬುವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದು ನನಗೆ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿ ಒಬ್ಬ ಮಹಿಳೆ ಮನೆಯ ಒಳಗೆ ಪ್ರವೇಶಿಸಿದ್ದಾಳೆ. ಒಳಗೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೊರಗೆ ಓಡಿ ಹೋಗಲು ಪ್ರಯತ್ನಿಸಿದಾಗ, ಮಗುವಿನ ತಾಯಿ ತಾಬುರಿಸ್ ತಡೆದಿದ್ದಾರೆ. ಆಕೆ ಬೊಬ್ಬೆ ಹೊಡೆದಾಗ ಮಗುವನ್ನು ನೆಲದಲ್ಲಿ ಬಿಟ್ಟು ತಡೆಯಲು ಬಂದ ತಬ್ಬಿರ್ಸ್‌ಗೆ ಚೂರಿಯಿಂದ ಗಾಯಗೊಳಿಸಿ ಪರಾರಿಯಾಗಿದ್ದಾರೆ.
ಈ ಮಹಿಳೆಯರು ಬೆಳಪು ಆಸುಪಾಸಿನಲ್ಲಿ ಇರುವ ಸಂಶಯವಿದ್ದು, ಯಾರಿಗಾದರೂ ಮಹಿಳೆಯರು ಕಂಡು ಬಂದಲ್ಲಿ ತಕ್ಷಣ ಶಿರ್ವ ಠಾಣೆಗೆ 9480805450ಗೆ ತಿಳಿಸಲು ಕೋರಲಾಗಿದೆ.

Previous articleಪ್ರಾಣಿ ಬಲಿ ತಡೆ: ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಲಕ್ಕವ್ವದೇವಿ ಜಾತ್ರೆ
Next articleದಕ್ಷಿಣ ಕನ್ನಡ: ಸದ್ಯದಲ್ಲೇ ಪೋಡಿಮುಕ್ತ ಸಿಎಂ ಘೋಷಣೆ