ಭಾರತ-ಪಾಕ್ ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ಉದ್ಭವವಾದ ಬೆನ್ನಲ್ಲೇ ಭಾರತದ 27 ವಿಮಾನ ನಿಲ್ದಾಣಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಆದೇಶಿಸಿದೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನ 27 ವಿಮಾನ ನಿಲ್ದಾಣಗಳ ಸೇವೆಯನ್ನು ಶನಿವಾರ ಬೆಳಗ್ಗೆಯವರೆಗೆ ರದ್ದು ಮಾಡಲಾಗಿದೆ. ಇದರಿಂದ 430 ವಿಮಾನಗಳ ಹಾರಾಟ ರದ್ದಾಗಿದೆ.