ನಾನೇಕೆ ರಾಜೀನಾಮೆ ಕೊಡಬೇಕು…?

0
44

ಬೆಂಗಳೂರು: ನಾನೇಕೆ ರಾಜೀನಾಮೆ ಕೊಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆ ನೀಡುತ್ತಾರಾ ಎಂದು ಸಚಿವ ಶಿವಾನಂದ ಪಾಟೀಲ್ ಅವರ ಸವಾಲು ಕುರಿತಂತೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಆರು ಏಳು ಭಾರಿ ಆಯ್ಕೆ ಆದಂತ ಜನ ಪ್ರತಿನಿದಿಗೆ ರಾಜೀನಾಮೆ ಕೋಡುವ ಕಾಮನ ಸೆನ್ಸ್ ಇಲ್ಲ, ಗ್ರಾಮ ಪಂಚಾಯಿತಿ ಸದಸ್ಯನಿಗಿರುವಷ್ಟು ತಿಳುವಳಿಕೆ ಇಲ್ಲ, ರಾಜೀನಾಮೆ ಪತ್ರ ಯಾರಾದರೂ ಹಾಗೆ ಷರತ್ತುಬದ್ಧವಾಗಿ ಬರೆಯುತ್ತಾರೆಯೇ, ಬ್ಲ್ಯಾಂಕ್ ಲೆಟರ್ ಹೆಡ್ ಕೊಡುತ್ತೇನೆ ಅಂತ ಹೇಳೋದ್ರಲ್ಲಿ ಅರ್ಥವಿಲ್ಲ, ಖಾಲಿ ಪತ್ರದಲ್ಲಿಯೇ ಸಹಿ ಮಾಡಿ ಕೊಡುತ್ತೇನೆ. ಇವೆಲ್ಲ ಬರಿ ನಾಟಕ, ಕೆಲಸಿಲ್ಲ ಅವರಿಗೆ ಸುಮ ಸುಮನೆ ಚುನಾವಣೆ ಮಾಡೋದಾ, ಮತದಾನ ಮಾಡಿ 5 ವರ್ಷಕ್ಕ ಆಯ್ಕೆ ಮಾಡಿದ್ದಾರೆ, ಅವರತ್ರ ದುಡ್ಡು ಇದೆ, ಭ್ರಷ್ಟಾಚಾರದ ದುಡ್ಡು ಇದೆ ಅದಕ್ಕೆ ಚಾಲೆಂಜ್ ಮಾಡಕೊಂತ ಹೊಂಟಾರ, ಇಂಥಾ ಚಾಲೆಂಜ್​ಗೆ ಹೆದರೋ ಮಗ ನಾನಲ್ಲ, ಏನೇ ಚಾಲೆಂಜ್‌ ಇದ್ದರು ಅವರೇ ರಾಜಿನಾಮೆ ಕೊಡಲಿ ಎಂದರು.

Previous articleಹಾವೇರಿ ಬಳಿ ಭೀಕರ ಅಪಘಾತ: 6 ಜನರು ಸಾವು
Next articleನಾಲ್ವಡಿ ಅರಸರನ್ನು ನಾವು ಸದಾ ಸ್ಮರಿಸಬೇಕು